×
Ad

ಪಾಕ್ ಪ್ರಧಾನಿ ಪುತ್ರಿಯಿಂದ ನಕಲಿ ದಾಖಲೆ: ಜಂಟಿ ತನಿಖಾ ತಂಡ ಆರೋಪ

Update: 2017-07-11 22:17 IST

ಇಸ್ಲಾಮಾಬಾದ್, ಜು. 11: ಪಾಕಿಸ್ತಾನದಲ್ಲಿ ಪನಾಮ ಭ್ರಷ್ಟಾಚಾರ ಹಗರಣದ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡ (ಜೆಐಟಿ)ಕ್ಕೆ ಪ್ರಧಾನಿ ನವಾಝ್ ಶರೀಫ್ ಪುತ್ರಿ ಮರ್ಯಮ್ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಜೆಐಟಿ ಆರೋಪಿಸಿದೆ.

ಜೆ ಐಟಿಯು ಪ್ರಧಾನಿ ಶರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಹಣ ಬಿಳುಪು ಮಾಡಿದ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದೆ.

ಮರ್ಯಮ್ ನವಾಝ್, ಅವರ ಸಹೋದರರಾದ ಹುಸೈನ್ ಮತ್ತು ಹಸನ್ ನವಾಝ್, ಹಾಗೂ ಅವರ ಗಂಡ ಕ್ಯಾಪ್ಟನ್ ಮುಹಮ್ಮದ್ ಸಫ್ದರ್ ಸುಪ್ರೀಂ ಕೋರ್ಟನ್ನು ತಪ್ಪು ದಾರಿಗೆಳೆಯುವ ಉದ್ದೇಶದಿಂದ ನಕಲಿ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎಂದು ತನಿಖಾ ತಮಡ ಆರೋಪಿಸಿದೆ.

ಮರ್ಯಮ್ ತನ್ನ ಗೊತ್ತಿರುವ ಆದಾಯ ಮೂಲಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂಬುದಾಗಿಯೂ ಅದು ಆರೋಪಿಸಿದೆ ಎಂದು ‘ಡಾನ್’ ಪತ್ರಿಕೆ ಮಂಗಳವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News