×
Ad

ಶ್ವೇತಭವನಕ್ಕೆ ಭಾರತೀಯ ಮೂಲದ ಮಹಿಳೆ

Update: 2017-07-11 23:39 IST

ವಾಶಿಂಗ್ಟನ್, ಜು. 11: ಅಮೆರಿಕದ ಶ್ವೇತಭವನದ ವಾರ್ತಾ ಮತ್ತು ನಿಯಂತ್ರಣ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಭಾರತೀಯ ಅಮೆರಿಕನ್ ವಕೀಲೆ ನಿಯೋಮಿ ರಾವ್‌ರ ನೇಮಕವನ್ನು ಸೆನೆಟ್ ಅಂಗೀಕರಿಸಿದೆ.

ಅವರು 54-41 ಮತಗಳ ಅಂತರದಿಂದ ಆಯ್ಕೆಗೊಂಡರು. ಈ ಆಯ್ಕೆಯು ಪಕ್ಷಾಧಾರಿತವಾಗಿ ನಡೆಯಿತು.

44 ವರ್ಷದ ರಾವ್ ಹಲವಾರು ವರ್ಷಗಳ ಹಿಂದೆ ಸೆನೆಟರ್ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News