ಸುನಂದಾ ಪುಷ್ಕರ್ ಪ್ರಕರಣ: ನಿಲುವು ವ್ಯಕ್ತಪಡಿಸಲು ಕೇಂದ್ರಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಆದೇಶ
Update: 2017-07-12 21:15 IST
ಹೊಸದಿಲ್ಲಿ, ಜು. 12: ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಕುರಿತು ನ್ಯಾಯಾಲಯದ ನಿಗಾದಲ್ಲಿ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ ನಡೆಸಬೇಕೆನ್ನುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮನವಿ ಬಗ್ಗೆ ನಿಲುವು ವ್ಯಕ್ತಪಡಿಸಬೇಕು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
ಈ ಕುರಿತು ನೋಟೀಸು ಜಾರಿ ಮಾಡಿದ ನ್ಯಾಯಮೂರ್ತಿ ಜಿ.ಎಸ್. ಸಿಸ್ಟಾನಿ ಹಾಗೂ ಪಿ.ಎಸ್. ತೇಜಿ ಒಳಗೊಂಡ ನ್ಯಾಯಪೀಠ, ಮನವಿಗೆ ಸಂಬಂಧಿಸಿ ಗೃಹ ಸಚಿವಾಲಯ, ಸಿಬಿಐ ಹಾಗೂ ದಿಲ್ಲಿ ಪೊಲೀಸ್ ನಿಲುವು ವ್ಯಕ್ತಪಡಿಸಬೇಕು ಎಂದಿದೆ.
ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜುಲೈ 20ಕ್ಕೆ ನಿಗದಿಪಡಿಸಿದೆ. ತನಿಖೆಯಲ್ಲಿ ಅತಿಯಾದ ವಿಳಂಬವಾಗುತ್ತಿದೆ. ಇದು ನ್ಯಾಯ ವ್ಯವಸ್ಥೆಗೆ ಕಳಂಕ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
2017 ಜನವರಿ 14ರಂದು ಹೊಸದಿಲ್ಲಿಯ ಫೈಸ್ಟಾರ್ ಹೊಟೇಲ್‌ನ ರೂಮ್ ಒಂದರಲ್ಲಿ ಪುಷ್ಕರ್ ಅವರ ಮೃತದೇಹ ಪತ್ತೆಯಾಗಿತ್ತು.