200 ವಲಸಿಗರಿಗೆ ಅಮೆರಿಕ ಪ್ರಜೆಗಳಾಗಿ ಪ್ರಮಾಣವಚನ
Update: 2017-07-12 23:13 IST
ಬೋಸ್ಟನ್, ಜು. 12: ಬೋಸ್ಟನ್‌ನಲ್ಲಿರುವ ಜಾನ್ ಎಫ್. ಕೆನಡಿ ಅಧ್ಯಕ್ಷೀಯ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯದಲ್ಲಿ ಸುಮಾರು 200 ವಲಸಿಗರಿಗೆ ಬುಧವಾರ ಅಮೆರಿಕದ ನೂತನ ಪ್ರಜೆಗಳಾಗಿ ಪ್ರಮಾಣವಚನ ಬೋಧಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮ್ಯಾಸಚುಸೆಟ್ಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಡೆನಿಸ್ ಸೇಲರ್ ವಹಿಸಿದರು.