×
Ad

21 ಲಕ್ಷ ಹೊಂಡಾ ವಾಹನಗಳು ಹಿಂದಕ್ಕೆ

Update: 2017-07-15 22:55 IST

ವಾಶಿಂಗ್ಟನ್, ಜು. 15: ಬೆಂಕಿಗೆ ಕಾರಣವಾಗಬಹುದಾದ ಬ್ಯಾಟರಿ ಸೆನ್ಸರ್‌ಗಳನ್ನು ಬದಲಿಸಲು ಪ್ರಪಂಚದಾದ್ಯಂತ ಸುಮಾರು 21 ಲಕ್ಷ ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಹೊಂಡಾ ಮೋಟರ್ ಕಂಪೆನಿ ಶುಕ್ರವಾರ ತಿಳಿಸಿದೆ.

ಈ ಪೈಕಿ, 2013-2016ರ ಅವಧಿಯ ವಿವಿಧ ಮಾದರಿಗಳ 11.5 ಲಕ್ಷ ಹೊಂಡಾ ಅಕಾರ್ಡ್ ವಾಹನಗಳು ಅಮೆರಿಕದಲ್ಲೇ ಇವೆ ಎಂದು ಜಪಾನ್ ಕಾರು ತಯಾರಕಾ ಸಂಸ್ಥೆಯ ವಕ್ತಾರ ಕ್ರಿಸ್ ಮಾರ್ಟಿನ್ ಹೇಳಿದರು. ಸುಮಾರು 10 ಲಕ್ಷ ಈ ಮಾದರಿಯ ವಾಹನಗಳು ಇತರ ದೇಶಗಳಲ್ಲಿವೆ. ಈ ವಾಹನಗಳಲ್ಲಿನ 12-ವೋಲ್ಟ್ ಬ್ಯಾಟರಿ ಸೆನ್ಸರ್‌ಗಳನ್ನು ಬದಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News