ಅಕ್ರಮ ವಲಸಿಗರಿಗೆ ನೆರವು: 3 ಬ್ರಿಟಿಶ್ ಸಿಖ್ಖರಿಗೆ ಜೈಲು
Update: 2017-07-15 23:04 IST
ಲಂಡನ್, ಜು. 15: ತಮ್ಮ ಪಾಸ್‌ಪೋರ್ಟ್‌ಗಳನ್ನು ದುರುಪಯೋಗಪಡಿಸಿಕೊಂಡು ಸುಮಾರು 70 ಅಫ್ಘಾನ್ ವಲಸಿಗರು ಬ್ರಿಟನ್ ಪ್ರವೇಶಿಸಲು ಸಹಾಯ ಮಾಡಿರುವ ಆರೋಪವನ್ನು ಎದುರಿಸುತ್ತಿರುವ ಮೂವರು ಬ್ರಿಟಿಶ್ ಸಿಖ್ಖರಿಗೆ ಒಟ್ಟು 19 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಇದು 600000 ಪೌಂಡ್ (5.05 ಕೋಟಿ ರೂಪಾಯಿ) ಮೊತ್ತದ ಹಗರಣವಾಗಿದೆ.
ದಲ್ಜಿತ್ ಕಪೂರ್‌ಗೆ ಏಳು ವರ್ಷ, ಹರ್ಮಿತ್ ಕಪೂರ್‌ಗೆ 4.5 ವರ್ಷ ಮತ್ತು ದೇವಿಂದರ್ ಚಾವ್ಲಾಗೆ 7.5 ವರ್ಷಗಳ ಜೈಲು ಶಿಕ್ಷೆಯನ್ನು ಕಳೆದ ವಾರ ಇನ್ನರ್ ಲಂಡನ್ ಕ್ರೌನ್ ನ್ಯಾಯಾಲಯ ವಿಧಿಸಿದೆ. ತಮ್ಮ ವಯಸ್ಸಿನ 40ರ ದಶಕದಲ್ಲಿರುವ ಅವರೆಲ್ಲರೂ ಪರಸ್ಪರ ಸಂಬಂಧಿಗಳಾಗಿದ್ದಾರೆ.