×
Ad

ಚೀನಾ: ಮಾನವಹಕ್ಕು ಹೋರಾಟಗಾರನ ಬಿಡುಗಡೆ

Update: 2017-07-15 23:08 IST

ಬೀಜಿಂಗ್, ಜು. 15: ಚೀನಾದ ಪ್ರಮುಖ ಮಾನವಹಕ್ಕುಗಳ ಕಾರ್ಯಕರ್ತ ಕ್ಸು ಝಿಯಾಂಗ್‌ರನ್ನು ನಾಲ್ಕು ವರ್ಷಗಳ ಜೈಲುವಾಸದ ಬಳಿಕ ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದ್ದಾರೆ.

ವ್ಯವಸ್ಥೆಯೊಳಗೆ ಇದ್ದುಕೊಂಡೇ ಬದಲಾವಣೆಗಾಗಿ ಪ್ರಯತ್ನಿಸಬೇಕು ಎಂಬುದಾಗಿ ಕ್ಸು ಸ್ಥಾಪಿಸಿದ ಸಂಘಟನೆ ‘ನ್ಯೂ ಸಿಟಿಝನ್ಸ್ ಮೂವ್‌ಮೆಂಟ್’ ಕರೆ ನೀಡುತ್ತದೆ.

ಅವರನ್ನು 2013ರಲ್ಲಿ ಬಂಧಿಸಲಾಗಿತ್ತು ಹಾಗೂ ಸಾರ್ವಜನಿಕ ವ್ಯವಸ್ಥೆಯನ್ನು ಹಾಳುಗೆಡವಲು ಜನರನ್ನು ಒಟ್ಟುಗೂಡಿಸಿದ ಆರೋಪದಲ್ಲಿ ಅವರನ್ನು ಶಿಕ್ಷಿಸಲಾಗಿತ್ತು.

 ಚೀನಾದ ಪ್ರಜಾಪ್ರಭುತ್ವ ಹೋರಾಟಗಾರ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಲಿಯು ಕ್ಸಿಯಾವೊಬೊ ಬಂಧನದಲ್ಲಿರುವಾಗಲೇ ಕ್ಯಾನ್ಸರ್‌ನಿಂದ ಮೃತಪಟ್ಟ ಎರಡು ದಿನದ ಬಳಿಕ ಕ್ಸು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News