×
Ad

ಮೀನು ಹಿಡಿಯುವುದರಲ್ಲಿಯೇ 40ವರುಷ ಕಳೆದೆ....

Update: 2017-07-16 20:32 IST

ಮಂಗಳೂರು, ಜು.16:‘‘ನಾನು ಓದಿದ್ದು 4ನೆ ತರಗತಿ. ಈಗ 65ವರ್ಷ ಕಳೆದಿದೆ.  40 ವರುಷಗಳಿಂದ ಈ ರೀತಿ ಮೀನುಹಿಡಿಯುತ್ತಾ ಬದುಕುತ್ತಿದ್ದೇನೆ. ಎಂದು ಚಿತ್ರದುರ್ಗದ ಬಾಯಾರ್ ಪೇಟೆಯ ಮೀನುಹಿಡಿಯುವ ವೃತ್ತಿಯ ಖಲೀಲ್ ಇಂದು ಪಿಲಿಕುಳದ ಕೆರೆಯಲ್ಲಿ ಮೀನು ಹಿಡಿಯಲು ಬಂದಾಗ ತಮ್ಮ ಅಭಿಪ್ರಾಯ ಹಂಚಿಕೊಂಡರು.

ರಾಜ್ಯದ ವಿವಿಧ ಕಡೆ ಒಳನಾಡಿನ ಮಿನುಗಾರಿಕೆಯಲ್ಲಿ ಕೆರೆ, ಕೊಳ, ನದಿಗಳಲ್ಲಿ ಮೀನು ಹಿಡಿಯುವ ವೃತ್ತಿಯಲ್ಲಿ ತೊಡಗಿರುವ ವೃತ್ತಿಪರ ಮೀನುಗಾರರಾದ ಖಲೀಲ್ ದಿನವೊಂದಕ್ಕೆ ಟನ್‌ಗಟ್ಟಲೆ ಮೀನು ಹಿಡಿಯುತ್ತೇವೆ. ಮೀನು ಹಿಡಿಯುವ ನಮ್ಮ ಸಾಮರ್ಥ್ಯ ತಿಳಿದವರು ನಮ್ಮನ್ನು ಕರೆಸುತ್ತಾರೆ ಎನ್ನುತ್ತಾರೆ. ಪಿಲಿಕುಳದ ಮೀನು ಉತ್ಸವಕ್ಕೆ ಬಂದ ತಂಡದಲ್ಲಿ ಚತ್ರದುರ್ಗದ ಖಲೀಲ್, ಫಾತಿಮಾ, ಝಬೀರ್ ಮತ್ತು ಬಾಷಾ ಇದ್ದಾರೆ.

‘‘ನಮಗೆ ಕಮೀಷನ್ ಆಧಾರದಲ್ಲಿ ಸಂಬಳ ನೀಡುತ್ತಾರೆ. ಈ ಬಾರಿಯೂ ಸುಮಾರು 600 ಕೆ.ಜಿ.ಮೀನು ದೊರೆಯಬಹುದು. ಪಿಲಿಕುಳಕ್ಕೆ ಕಳೆದ ಎರಡು ವರ್ಷದಿಂದ ಮೀನು ಹಿಡಿಯಲು ಬರುತ್ತಿದ್ದೇನೆ. ಒಂದು ಕೆ.ಜಿ.ಗೆ 30ರಿಂದ 40 ರೂ ಕಮೀಷನ್ ನೀಡುತ್ತಾರೆ. ಇಲ್ಲಿ ಎಷ್ಟು ಕೊಡ್ತಾರೆ ನೋಡಬೇಕು. ಕರಾವಳಿಯಲ್ಲಿ ಕಾರ್ಕಳ, ಮಠದ ಕರೆ , ರಾಮಸಮುದ್ರ, ಮೊದಲಾದ ಕಡೆ ಮೀನು ಹಿಡಿದಿದ್ದೇವೆ.  ಉಳಿದ ದಿನಗಳಲ್ಲಿ ಒಳ ನಾಡಿನ ಮೀನು ಸಾಕುವವರ ಕೆರೆಗಳಲ್ಲಿ ಮೀನು ಹಿಡಿಯುವ ಕಾಂಟ್ರಾಕ್ಟ್ ವಹಿಸಿಕೊಳ್ಳುತ್ತೇವೆ. ಶಿವಮೊಗ್ಗದ ಚೆನ್ನಗಿರಿಯಲ್ಲಿ ಈ ರೀತಿ ಕೊಳದಲ್ಲಿ ಮೀನು ಹಿಡಿಯುತ್ತಿದ್ದೇವೆ ’’ಎಂದು ಖಲೀಲ್ ತಮ್ಮ ಮೀನುಗಾರಿಕಾ ವೃತ್ತಿಯ ಬಗ್ಗೆ ತಿಳಿಸುತ್ತಾರೆ.

ಮೀನುಗಾರರಿಗೆ ಸರಕಾರದಿಂದ ದೊರೆಯುವ ಯಾವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಇಲ್ಲದ ಈ ವೃತ್ತಿಪರ ಮೀನುಗಾರರು ತಮ್ಮ ವೃತ್ತಿ ಯಲ್ಲಿ ಬಂದ ಆದಾಯವನ್ನು ಮಾತ್ರ ನಂಬಿಕೊಂಡು ಬದುಕುತ್ತಿದ್ದಾರೆ. ತಾವೇ ತಂದಿರುವ ಬಲೆಗಳನ್ನು ತಂದು ಹರಿಗೋಲಿನ ಸಹಾಯದೊಂದಿಗೆ ನೀರಿನಲ್ಲಿ ಬಲೆ ಬೀಸಿ ಮೀನು ಹಿಡಿಯುತ್ತಾರೆ.

ಪಿಲಿಕುಳದ ಮೀನು ಉತ್ಸವಕ್ಕಾಗಿ ಶನಿವಾರವೇ ಬಂದಿರುವ ಇವರು ಪಿಲಿಕುಳದಲ್ಲಿ ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಡಾ.ಶಿವರಾಮ ಕಾರಂತರ ನಿಸರ್ಗಧಾಮ ಪಿಲಿಕುಳ ಇದರ ವತಿಯಿಂದ ಮತ್ಸೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News