ಮೊಬೈಲ್ ಬಳಕೆ ಆಕ್ಷೇಪ ; ಆರ್ಮಿ ಮೇಜರ್ ನ್ನು ಕೊಂದ ಜವಾನ..!

Update: 2017-07-18 07:52 GMT

ಶ್ರೀನಗರ, ಜು.18: ಕರ್ತವ್ಯದ ವೇಳೆ  ಮೊಬೈಲ್ ಪೋನ್ ಬಳಕೆ ಮಾಡುವುದನ್ನು ಆಕ್ಷೇಪಿಸಿದ ಆರ್ಮಿಯ ಮೇಜರ್ ಒಬ್ಬರನ್ನು ಯೋಧನೊಬ್ಬ ಸಿಟ್ಟಿನಿಂದ ಗುಂಡುಕ್ಕಿ ಕೊಂದ ಘಟನೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದಿದೆ. 

71 ಸಶಸ್ತ್ರ ರೆಜಿಮೆಂಟ್ ಮೇಜರ್ ಶಿಖರ್  ಥಾಪ ಎಂಬವರು ಜವಾನನ ಗುಂಡಿಗೆ ಬಲಿಯಾಗಿದ್ದಾರೆ. ಅವರನ್ನು ಇತ್ತೀಚೆಗಷ್ಟೇ 8 ರಾಷ್ಟ್ರೀಯ ರೈಫಲ್ ಪಡೆಗೆ ನಿಯೋಜಿಸಲಾಗಿತ್ತು.

ಮೇಜರ್ ಶಿಖರ್ ಥಾಪ ಅನರೀಕ್ಷಿತ ತಪಾಸಣೆ ನಡೆಸುತ್ತಿದ್ದಾಗ ಜವಾನನ ಕೈಯಲ್ಲಿ ಮೊಬೈಲ್ ಪತ್ತೆಯಾಯಿತು ಎನ್ನಲಾಗಿದೆ. ಕರ್ತವ್ಯದ ವೇಳೆ  ಮೊಬೈಲ್ ಬಳಸುತ್ತಿರುವುದಕ್ಕೆ ಜವಾನನ್ನು ಬೈದು ಆತನ ಕೈಯಲ್ಲಿದ್ದ  ಮೊಬೈಲ್ ನ್ನು ವಶಪಡಿಸಿಕೊಂಡರೆನ್ನಲಾಗಿದೆ.

ತನ್ನ ಮೊಬೈಲ್ ನ್ನು ಕಿತ್ತುಕೊಂಡ ಕಾರಣಕ್ಕಾಗಿ ಕೋಪಗೊಂಡ ಜವಾನ್ ತನ್ನಲ್ಲಿರುವ ಎಕೆ 47 ರೈಫಲ್ ನಿಂದ ಮೇಜರ್ ಶಿಖರ್ ಗೆ  ಹಿಂದಿನಿಂದ ಗುಂಡು ಹಾರಿಸಿದ ಎಂದು ತಿಳಿದು ಬಂದಿದೆ.

ಗಂಭೀರ ಗಾಯಗೊಂಡ ಮೇಜರ್ ಶಿಖರ್  ಥಾಪರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು  ಎಂದು  ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News