ಸಹೋದ್ಯೋಗಿಯ ಸಾವು: ಸಿಆರ್‌ಪಿಎಫ್ ಯೋಧರಿಂದ ಕಮಾಂಡರ್‌ಗೆ ಥಳಿತ
Update: 2017-07-23 21:38 IST
ಶ್ರೀನಗರ,ಜು.23: ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಅನುಮತಿ ನಿರಾಕರಿಸಲ್ಪಟ್ಟಿದ್ದ ಸಹೋದ್ಯೋಗಿಯು ಮೃತಪಟ್ಟ ಬಳಿಕ ರೊಚ್ಚಿಗೆದ್ದ ಸಿಆರ್‌ಪಿಎಫ್ ಯೋಧರು ತಮ್ಮ ಕಂಪನಿ ಕಮಾಂಡರ್‌ಗೆ ಥಳಿಸಿದ ಘಟನೆ ರವಿವಾರ ಅನಂತನಾಗ್ ಜಿಲ್ಲೆಯಲ್ಲಿ ನಡೆದಿದೆ.
ಅನಂತನಾಗ್‌ನ ವಾನ್ಪೊ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್ ಯೋಧನೋರ್ವ ಅನಾರೋಗ್ಯದಿಂದ ಬಳಲುತ್ತಿದ್ದು, ಸಮೀಪದ ಆಸ್ಪತ್ರೆಗೆ ತೆರಳಲು ಆತ ಅನುಮತಿಯನ್ನು ಕೋರಿದ್ದ. ಆದರೆ ಕಂಪನಿ ಕಮಾಂಡರ್ ಅನುಮತಿ ನೀಡಲು ನಿರಾಕರಿಸಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಸಿಆರ್‌ಪಿಎಫ್ ಈ ಘಟನೆಯನ್ನು ದೃಢೀಕರಿಸಿಲ್ಲ,ನಿರಾಕರಿಸಿಯೂ ಇಲ್ಲ.