×
Ad

94 ಮೀಟರ್ ಆಳದಲ್ಲಿ ರೈಲು ನಿಲ್ದಾಣ!

Update: 2017-07-24 23:00 IST

ಬೀಜಿಂಗ್,ಜು.23: 94 ಮೀಟರ್ ಆಳದ ಭೂಗರ್ಭದಲ್ಲಿ ಮೆಟ್ರೋ ರೈಲು ನಿಲ್ದಾಣದ ನಿರ್ಮಾಣ ಕಾಮಗಾರಿಯನ್ನು ಚೀನಾ ಆರಂಭಿಸಿದೆ. ನೈಋತ್ಯ ಚೀನಾದಲ್ಲಿರುವ ಚಾಂಗ್‌ಕಿಂಗ್ ನಗರದ ಹಾಂಗ್‌ಟುಡಿ ರೈಲು ನಿಲ್ದಾಣದಲ್ಲಿ ಸ್ಥಾಪನೆಯಾಗಲಿರುವ ಈ ಮೆಟ್ರೋ ನಿಲ್ದಾಣದ ಆಳವು 31 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮಾನವಾದುದಾಗಿದೆ. ಇದರೊಂದಿಗೆ ಈ ನಿಲ್ದಾಣವು ಚೀನಾದ ಅತ್ಯಂತ ಆಳದ ರೈಲುನಿಲ್ದಾಣವೆಂಬ ದಾಖಲೆಯನ್ನು ನಿರ್ಮಿಸಲಿದೆ.

  ಹಾಂಗ್‌ತುಡಿ ಮೆಟ್ರೋ ರೈಲು ನಿಲ್ದಾಣವನ್ನು ಆರು ವರ್ಷಗಳ ಹಿಂದೆ 60 ಮೀಟರ್ ಆಳದಲ್ಲಿ ನಿರ್ಮಾಣವಾಗಿತ್ತು. ಇದೀಗ ನಗರದ 10ನೇ ರೈಲು ಮಾರ್ಗದ ಜೊತೆ ಸಂಪರ್ಕಿಸುವ ಉದ್ದೇಶದಿಂದ ನಿಲ್ದಾಣದ ಆಳವನ್ನು ಇನ್ನೂ 30 ಮೀಟರ್‌ವರೆಗೆ ವಿಸ್ತರಿಸಲಾಗಿದೆ. ನೂತನ ಮೆಟ್ರೋ ಮಾರ್ಗವು 2017ರ ಅಂತ್ಯದೊಳಗೆ ಕಾರ್ಯಾರಂಭಗೊಳ್ಳುವ ಸಾಧ್ಯತೆಯಿದೆ.

  ಚಾಂಗ್‌ಕಿಂಗ್ ನಗರವು ಚೀನಾದ ಪರ್ವತ ನಗರವಾಗಿದೆ. ಇಲ್ಲಿನ ಪರ್ವತಾವೃತವಾದ ಪರಿಸರ ಹಾಗೂ ವೇಗವಾಗಿ ಬೀಸುವ ಗಾಳಿಯಿಂದ ರಕ್ಷಣೆ ಪಡೆಯಲು ಈ ರೈಲು ನಿಲ್ದಾಣವನ್ನು ಭೂಗರ್ಭದಲ್ಲಿ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News