×
Ad

ಗಡಿಯಲ್ಲಿ ಗುಂಡು ಹಾರಾಟ: ಪಾಕ್ ಪ್ರತಿಭಟನೆ

Update: 2017-07-24 23:10 IST

ಇಸ್ಲಾಮಾಬಾದ್,ಜು.24: ಗಡಿನಿಯಂತ್ರಣ ರೇಖೆಯಲ್ಲಿ ಭಾರತೀಯ ಪಡೆಗಳು ಕದನವಿರಾಮ ಉಲ್ಲಂಘಿಸಿ ನಡೆಸಿದ ಗುಂಡೆಸೆತದಲ್ಲಿ ತನ್ನ ಓರ್ವ ನಾಗರಿಕ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆಂದು ಆರೋಪಿಸಿ, ಪಾಕ್ ಸೋಮವಾರ ಭಾರತದ ಉಪ ಹೈಕಮಿಶನರ್ ಜೆ.ಪಿ.ಸಿಂಗ್ ಅವರನ್ನು ಕರೆಸಿಕೊಂಡು ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ.

ದಕ್ಷಿಣ ಏಶ್ಯ ಹಾಗೂ ಸಾರ್ಕ್ ರಾಷ್ಟ್ರಗಳ ಕುರಿತ ವ್ಯವಹಾರಗಳ ನಿರ್ದೇಶಕ ಡಾ. ಮುಹಮ್ಮದ್ ಫೈಸಲ್ ಅವರು ಜೆ.ಪಿ.ಸಿಂಗ್ ಅವರನ್ನು ಕರೆಸಿಕೊಂಡು ಭಾರತದ ‘ಆಕ್ರಮಣಕಾರಿ’ ಪಡೆಗಳು ಕದನವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯನ್ನು ಖಂಡಿಸಿದರೆಂದು ಪಾಕ್ ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.

 ಜುಲೈ 21ರಂದು ಭಾರತೀಯ ಪಡೆಗಳು ಗಡಿನಿಯಂತ್ರಣ ರೇಖೆಯ ಲೀಪಾ ಸೆಕ್ಟರ್ ಬಳಿಕ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಗೀಕೋಟ್ ಗ್ರಾಮದ ಬಾಲಕ ಉಮೈರ್ (12) ಮೃತಪಟ್ಟಿದ್ದಾನೆ ಹಾಗೂ ಇತರ ಮೂವರು ಗಾಯ ಗೊಂಡಿರುವುದಾಗಿ ಪಾಕ್ ವಿದೇಶಾಂಗ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News