ನಿರಾಶ್ರಿತರನ್ನು ಫ್ರೆಂಚ್ ಪೊಲೀಸರು ಹಿಂಸಿಸುತ್ತಿದ್ದಾರೆ: ಹ್ಯೂಮನ್ ರೈಟ್ಸ್ ವಾಚ್

Update: 2017-07-27 09:34 GMT

ಪ್ಯಾರಿಸ್,ಜು.27: ಬಂದರು ನಗರವಾದ ಕಲಾಯಿಸ್‍ನಲ್ಲಿ  ನಿರಾಶ್ರಿತರು ಮತ್ತು ವಲಸೆಗಾರರನ್ನು ಫ್ರೆಂಚ್‍ಪೊಲೀಸರು  ನಿರಂತರವಾಗಿ ಪೀಡಿಸುತ್ತಿದ್ದಾರೆ ಎಂದು ಹ್ಯೂಮನ್ ರೈಟ್ಸ್‍ವಾಚ್ ಹೇಳಿದೆ.

 ಕಳೆದಿವಸ ಸಂಘಟನೆಯು ಬಿಡುಗಡೆಗೊಳಿಸಿದ ಒಂದು ವರದಿಯಲ್ಲಿ ಈ ವಿವರಗಳಿವೆ.  ನಿರಾಶ್ರಿತರ ಮಕ್ಕಳಿಗೂ ಹಿಂಸೆ ನೀಡುತ್ತಿದ್ದಾರೆ. ಕರಿಮೆಣಸುಹುಡಿಯ ಸ್ಪ್ರೇಯನ್ನು ಪ್ರಯೋಗಿಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಆದರೆ, ಇದೆಲ್ಲ ಗಮನಕ್ಕೆ ಬಂದರೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ವಲಸೆಗಾರರಾಗಿ ಬಂದವರ ಆಹಾರ, ಬಟ್ಟೆ, ಬ್ಲಾಂಕೆಟ್‍ಗಳು, ನೀರು ಇವನ್ನೆಲ್ಲ ವಶಪಡಿಸಿಕೊಂಡು ಮಲಿನಗೊಳಿಸಲಾಗುತ್ತಿದೆ.

ಅತ್ತಿತ್ತ ನಡೆದಾಡುವ ಮತ್ತು ಶಾಂತವಾಗಿ ನಿದ್ರಿಸುವ ಮಕ್ಕಳಿಗೆ ಕರಿಮೆಣಸು ಸ್ಪ್ರೇ ಸಿಂಪಡಿಸುತ್ತಿರುವ ಘಟನೆಗಳು ಪ್ರತಿದಿನ ನಡೆಯುತ್ತಿವೆ ಎಂದು ಹ್ಯೂಮನ್ ರೈಟ್ಸ್‍ವಾಚ್‍ನ ಫ್ರೆಂಚ್ ನಿರ್ದೇಶಕರು  ತಿಳಿಸಿದ್ದಾರೆ. 61 ನಿರಾಶ್ರಿತರೊಂದಿಗೆ ಭೇಟಿಯಾಗಿ ವರದಿಯನ್ನು ತಯಾರಿಸಲಾಗಿದೆ. ವರದಿಯ ಆರೋಪಗಳನ್ನು ಫ್ರೆಂಚ್ ಅಧಿಕಾರಿಗಳು  ನಿಷೇಧಿಸಿದ್ದಾರೆ. ಆರೋಪಗಳಲ್ಲಿ ಹುರುಳಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News