ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣ ಸಂಗ್ರಹ: ಗಿಲಾನಿ ಕಿರಿಯ ಪುತ್ರನಿಗೆ ಎನ್‌ಐಎ ನೋಟಿಸ್

Update: 2017-07-27 17:20 GMT

ಹೊಸದಿಲ್ಲಿ, ಜು. 27: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣ ಸಂಗ್ರಹಿಸಿದ ಆರೋಪದಲ್ಲಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಹಿರಿಯ ಪುತ್ರ ನಯೀಮ್ ಗಿಲಾನಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ನೊಟೀಸು ಜಾರಿ ಮಾಡಿದೆ.

ಕಾಶ್ಮೀರ ಕಣಿವೆಯಲ್ಲಿ ಎನ್‌ಐಎ ಇತ್ತೀಚೆಗೆ ದಾಳಿ ನಡೆಸಿ ಗಿಲಾನಿಯ ಕಿರಿಯು ಪುತ್ರ ಬಿಟ್ಟಾ ಕರಾಟೆ ಹಾಗೂ ಆರು ಮಂದಿಯನ್ನು ಬಂಧಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದ ಏಳು ಮಂಂದಿ ಹುರಿಯತ್ ನಾಯಕರಿಗೆ ನ್ಯಾಯಾಲಯದ ಅನುಮತಿ ಪಡೆದು ಮಂಪರು ಪರೀಕ್ಷೆ ನಡೆಸಲಾಗುವುದು.

 ಸೈಯದ್ ಅಲಿ ಶಾ ಗಿಲಾನಿ ಸೇರಿದಂತೆ ಕಾಶ್ಮೀರ ಪತ್ಯೇಕತಾವಾದಿ ನಾಯಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಾಥಮಿಕ ತನಿಖೆ ನಡೆಸಿದೆ. ಪ್ರಾಥಮಿಕ ತನಿಖೆಗೆ ಒಳಗಾದವರಲ್ಲಿ ನಯೀಮ್ ಖಾನ್ ಫಾರೂಕ್ ಅಹ್ಮದ್ ದಾರ್ ಆಲಿಯಾಸ್ ಬಿಟ್ಟಾ ಕರಾಟೆ ಹಾಗೂ ತೆಹ್ರೀಕ್ ಎ ಹುರಿಯತ್‌ನ ಗಾಝಿ ಜಾವೇದ್ ಬಾಬಾ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News