ಜ್ವಾಲಾಮುಖಿ ಸ್ಫೋಟ: 9,000 ಜನರ ಮರಣ

Update: 2017-07-28 18:01 GMT

*1783 ಜು.29ರ ಈ ದಿನ ಲಾಖಾ ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಕಾಪ್ಟರ್ ಹೆಸರಿನ ಜ್ವಾಲಾಮುಖಿ ಸ್ಫೋಟದಲ್ಲಿ 9,000 ಜನ ದುರ್ಮರಣಕ್ಕೀಡಾದರು. ಆ ಪ್ರದೇಶದಲ್ಲಿದ್ದ ಸುಮಾರು 130 ಸಕ್ರಿಯ ಜ್ವಾಲಾಮುಖಿಗಳು ಒಮ್ಮೆಲೆ ಸ್ಫೋಟಿಸಿದ ಪರಿಣಾಮ ಬೃಹತ್ ಪ್ರಮಾಣದ ಲಾವಾರಸ ಚಿಮ್ಮಿತು. ಇದರಲ್ಲಿದ್ದ ಸಲ್ಫರ್ ಡೈ ಆಕ್ಸೈಡ್ ಹಾಗೂ ಹೈಡ್ರೋಪ್ಲೋರಿಕ್ ಆಮ್ಲ ಜನರ ಸಾವಿಗೆ ಕಾರಣವಾಯಿತು.

* ಸಮಾಜ ಸುಧಾರಕ ಬಂಗಾಳದ ಲೇಖಕ ಈಶ್ವರಚಂದ್ರ ವಿದ್ಯಾಸಾಗರ ಜು.29, 1891ರಂದು ತಮ್ಮ 70ನೆ ವಯಸ್ಸಿನಲ್ಲಿ ಕೋಲ್ಕತಾದಲ್ಲಿ ನಿಧನರಾದರು. ಬಂಗಾಳದಲ್ಲಿ 19ನೆ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡ ಅವರು, ಆ ಕಾಲದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ವಿರೋಧಿಸಿದ್ದಲ್ಲದೆ ಅವನ್ನು ತೊಡೆದುಹಾಕಲು ಹಗಲಿರುಳು ಶ್ರಮಿಸಿದರು. ವಿಶೇಷವಾಗಿ ಬಾಲ ವಿಧವೆಯರ ಮರು ಮದುವೆಯ ಕುರಿತು ಹೋರಾಟ ನಡೆಸಿದರು.

* 1802ರ ಈ ದಿನ ಬರೋಡಾದ ಗಾಯಕ್ವಾಡ್ ಮತ್ತು ಬ್ರಿಟಿಷರ ನಡುವೆ ಯುದ್ಧಒಪ್ಪಂದವಾಯಿತು.

* 1911ರ ಈ ದಿನ ಐ.ಎಫ್.ಎ. ಪದಕವನ್ನು ಗೆಲ್ಲುವ ಮೂಲಕ ಮೋಹನ್ ಬಗಾನ್ ಫುಟ್‌ಬಾಲ್ ತಂಡ ಆ ಸಾಧನೆ ಮಾಡಿದ ಮೊದಲ ತಂಡವೆನಿಸಿಕೊಂಡಿತು.

* 1949ರಲ್ಲಿ ಮಾಸ್ಕೊ ಪಶ್ಚಿಮ ಬರ್ಲಿನ್ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ತೆಗೆದುಹಾಕಿತು.

 * 1921ರಲ್ಲಿ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ನ್ಯಾಶನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ ಮುಖ್ಯಸ್ಥನಾದನು.

* 1848ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಐರಿಷ್ ರಾಷ್ಟ್ರೀಯವಾದಿಗಳು ನಡೆಸಿದ ದಂಗೆಯನ್ನು ಬ್ರಿಟಿಷರು ಹತ್ತಿಕ್ಕಿದರು.

* 1996ರ ಈ ದಿನವೇ ಸ್ವಾತಂತ್ರ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ದಿಲ್ಲಿಯಲ್ಲಿ ನಿಧನ ರಾದರು. ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಸಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ