ಶರಪೋವಾಗೆ ವೈರ್ಲ್ಡ್‌ಕಾರ್ಡ್

Update: 2017-07-28 18:45 GMT

ನ್ಯೂಯಾರ್ಕ್, ಜು.28: ಯುಎಸ್ ಓಪನ್‌ಗೆ ಅಭ್ಯಾಸ ಪಂದ್ಯವೆಂದೇ ಪರಿಗಣಿಸಲ್ಪಟ್ಟಿರುವ ಸಿನ್ಸಿನಾಟಿ ಡಬ್ಲುಟಿಎ ಟೂರ್ನಮೆಂಟ್‌ಗೆ ರಶ್ಯದ ಮರಿಯಾ ಶರಪೋವಾ ಗುರುವಾರ ವೈರ್ಲ್ಡ್ ಕಾರ್ಡ್ ಪಡೆದಿದ್ದಾರೆ. ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಮೆಂಟ್ ಯುಎಸ್ ಓಪನ್‌ಗೆ ಶರಪೋವಾ ಇನ್ನೂ ಸ್ಥಾನ ದೃಢಪಡಿಸಿಕೊಂಡಿಲ್ಲ. ವಿಶ್ವದ ಮಾಜಿ ನಂ.1 ಆಟಗಾರ್ತಿ ಶರಪೋವಾ ಎಪ್ರಿಲ್‌ನಲ್ಲಿ 15 ತಿಂಗಳ ನಿಷೇಧದಿಂದ ಹೊರಬಂದಿದ್ದು, ತನ್ನ ವೃತ್ತಿಜೀವನವನ್ನು ಮರು ರೂಪಿಸಿಕೊಳ್ಳುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ವಿಂಬಲ್ಡನ್ ಟೂರ್ನಿಯಿಂದ ದೂರ ಉಳಿದಿದ್ದ ಶರಪೋವಾಗೆ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸಲು ಆಯೋಜಕರು ವೈರ್ಲ್ಡ್ ಕಾರ್ಡ್ ನೀಡಲು ನಿರಾಕರಿಸಿದ್ದರು.

ಸಿನ್ಸಿನಾಟಿ ಟೂರ್ನಿಯು ಆ.12 ರಿಂದ 20ರ ತನಕ ನಡೆಯಲಿದೆ. ಈ ಟೂರ್ನಿಯಲ್ಲಿ ವಿಕ್ಟೋರಿಯ ಅಝರೆಂಕಾಗೆ ವೈರ್ಲ್ಡ್‌ಕಾರ್ಡ್ ನೀಡಲಾಗಿದೆ.
ವಿಶ್ವ ರ‍್ಯಾಂಕಿಂಗ್‌ನಲ್ಲಿ 173ನೆ ಸ್ಥಾನದಲ್ಲಿರುವ ಶರಪೋವಾ ಮೇನಲ್ಲಿ ರೋಮ್ ಓಪನ್‌ನಲ್ಲಿ ಗಾಯಗೊಂಡ ಬಳಿಕ ಯಾವುದೇ ಟೂರ್ನಿಯನ್ನು ಆಡಿಲ್ಲ. ಎಪ್ರಿಲ್‌ನಲ್ಲಿ ನಡೆದಿದ್ದ ಸ್ಟಟ್‌ಗರ್ಟ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News