ನಿಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಒಂದು ಬೇಯಿಸಿದ ಮೊಟ್ಟೆ ಸಾಕು.....ಗೊತ್ತೇ?

Update: 2017-07-29 09:27 GMT

ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ, ನಿಜ. ಆದರೆ ನಮ್ಮ ಆರೋಗ್ಯ ಆಹಾರ ಸೇವನೆಯನ್ನು ಮಾತ್ರ ಅವಲಂಬಿಸಿಲ್ಲ. ನಾವಿಂದು ವಿಷಕಾರಕಗಳು ಮತ್ತು ಮಾಲಿನ್ಯದಿಂದ ಕೂಡಿರುವ ವಾತಾವರಣದಲ್ಲಿ ಬದುಕುತ್ತಿದ್ದೇವೆ, ಹೀಗಾಗಿ ನಮ್ಮ ದೇಹದಲ್ಲಿ ವಿವಿಧ ರಾಸಾಯನಿಕಗಳು ಮತ್ತು ಮಾಲಿನ್ಯಕಾರಗಳು ಸೇರಿಕೊಳ್ಳುವ ಹೆಚ್ಚಿನ ಅಪಾಯವಿದೆ. ಇವು ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟದ ಕುಸಿತ/ಏರಿಕೆಯಂತಹ ಹಲವಾರು ಅಸಮತೋಲನಗಳಿಗೆ ಕಾರಣವಾಗುತ್ತವೆ.

ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ಹೇಗೆ ನಿಯಂತ್ರಿಸಬಹುದೆಂಬ ಮಾಹಿತಿ ಇಲ್ಲಿದೆ.

ರಕ್ತದಲ್ಲಿಯ ಸಕ್ಕರೆಯ ಮಟ್ಟದಲ್ಲಿ ಏರಿಳಿತಗಳು ನಮ್ಮ ಇಡೀ ದೇಹದ ಆರೋಗ್ಯದ ಮೇಲೆ ಗಣನೀಯ ಪರಿಣಾಮವನ್ನುಂಟು ಮಾಡುತ್ತವೆ. ಈ ಬದಲಾವಣೆಗಳು ಸದ್ದಿಲ್ಲದೆ ನಮ್ಮ ದೇಹಕ್ಕೆ ಶಾಶ್ವತ ಹಾನಿಯನ್ನುಂಟು ಮಾಡಬಲ್ಲವು.

ಮಧುಮೇಹ ರಕ್ತದಲ್ಲಿಯ ಸಕ್ಕರೆ ಪ್ರಮಾಣದ ಅಸಮತೋಲದಿಂದಾಗಿ ಕಾಣಿಸಿಕೊಳ್ಳುವ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲೊಂದಾಗಿದೆ. ಅದು ನಮ್ಮ ದೇಹವು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವ ರೀತಿಯ ಮೇಲೆಯೇ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದಾಗಿ ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರು ಇನ್ಸುಲಿನ್ ಅನ್ನು ಸೂಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಅದೃಷ್ಟವಶಾತ್ ರಕ್ತದಲ್ಲಿಯ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೈಸರ್ಗಿಕ ವಿಧಾನಗಳಿವೆ. ಅಂತಹ ಒಂದು ವಿಧಾನ ಇಲ್ಲಿದೆ. ಅದಕ್ಕಾಗಿ ಬೇಕಾಗಿರುವುದು ಒಂದು ಬೇಯಿಸಿದ ಮೊಟ್ಟೆ ಮತ್ತು ಸ್ವಲ್ಪ ವಿನೆಗರ್ ಮಾತ್ರ.

ಸಿದ್ಧತೆ: ಮಧ್ಯಾಹ್ನದ ವೇಳೆಗೆ ಒಂದು ಮೊಟ್ಟೆಯನ್ನು ಬೇಯಿಸಿಕೊಳ್ಳಿ. ಅದರ ಕವಚವನ್ನು ತೆಗೆದು ಸಣ್ಣದೊಂದು ಕಡ್ಡಿಯಿಂದ ನಾಲ್ಕೈದು ಕಡೆಗೆ ತೂತುಗಳನ್ನು ಮಾಡಿ. ಬಳಿಕ ಈ ಮೊಟ್ಟೆಯನ್ನು ಒಂದು ಕಪ್‌ನಲ್ಲಿಟ್ಟು ಅದಕ್ಕೆ ಸ್ವಲ್ಪ ವಿನೆಗರ್ ಸೇರಿಸಿ. ಇಷ್ಟಾದ ಬಳಿಕ ರಾತ್ರಿಯಿಡೀ ಮೊಟ್ಟೆಯನ್ನು ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ ಒಂದು ಗ್ಲಾಸ್ ಬೆಚ್ಚಗಿನ ನೀರಿನೊಂದಿಗೆ ಮೊಟ್ಟೆಯನ್ನು ತಿಂದುಬಿಡಿ. ಪ್ರತಿದಿನವೂ ಹೀಗೆ ಮಾಡಿದರೆ ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿರುವುದು ನಿಮಗೇ ಗೊತ್ತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News