ಬ್ರಿಟಿಷರ ಮುಂದೆ ಸಾವರ್ಕರ್

Update: 2017-07-30 04:18 GMT

 ಕೈದಿಗಳಲ್ಲಿ (ಕೇಸ್‌ಮೆನ್) ಬಹುಸಂಖ್ಯಾತರನ್ನು ಹೊರಕಳುಹಿಸಿದಾಗ, ನಾನು ನನ್ನ ಬಿಡುಗಡೆಗಾಗಿ ವಿನಂತಿಸಿಕೊಂಡೆ. ಆದರೆ ನನಗೆ ಎರಡೋ ಮೂರೋ ಬಾರಿಯಷ್ಟೆ ಛಡಿಏಟು ನೀಡಲಾಗಿತ್ತಾದರೂ ಬಿಡುಗಡೆ ಗೊಂಡವರಲ್ಲಿ ಒಂದು ಡಝನ್ ಅಥವಾ ಅದಕ್ಕೂ ಹೆಚ್ಚು ಬಾರಿ ಛಡಿಏಟು ತಿಂದಿದ್ದವರಿದ್ದರೂ, ನನ್ನನ್ನು ಬಿಡುಗಡೆ ಮಾಡಲಿಲ್ಲ; ಯಾಕೆಂದರೆ ನಾನು ಅವರ ಕೇಸ್‌ಮೆನ್ ಆಗಿದ್ದೆ.

ಬ್ರಿ ಟಿಷ್ ಸರಕಾರಕ್ಕೆ ಸಾವರ್ಕರ್ ಸಲ್ಲಿಸಿದ ಕ್ಷಮಾದಾನ(ಮರ್ಸಿ) ಅರ್ಜಿಯ ಪಠ್ಯ(ಟೆಸ್ಟ್)

ಈ ಕೆಳಗಿನ ಕ್ಷಮಾದಾನ ಅರ್ಜಿಯನ್ನು ಆರ್.ಸಿ.ಮಜುಂದಾರ್‌ರವರ ‘‘ಪೀನಲ್ ಸೆಟ್ಲ್‌ಮೆಂಟ್ ಇನ್ ಅಂಡಮಾನ್ಸ್’’ಎಂಬ ಪುಸ್ತಕದಿಂದ ಆಯ್ದು ಕೊಡಲಾಗಿದೆ.(ಪು.211-213) ಈ ಪುಸ್ತಕವನ್ನು 1975ರಲ್ಲಿ ಭಾರತ ಸರಕಾರದ ಸಂಸ್ಕೃತಿ ಇಲಾಖೆ ಪ್ರಕಟಿಸಿತು. ಕುತೂಹಲದ ವಿಷಯವೆಂದರೆ, ಆರ್.ಸಿ. ಮಜುಂದಾರ್‌ರನ್ನು ಹಿಂದುತ್ವ ಕ್ಯಾಂಪ್ ಓರ್ವ ನಿಜವಾದ ಇತಿಹಾಸಕಾರ ನೆಂದು ಪರಿಗಣಿಸುತ್ತದೆ. (ಶಂಸುಲ್ ಇಸ್ಲಾಂ),

1913ರ ನವೆಂಬರ್ 14ರಂದು ಭಾರತ ಸರಕಾರದ ಗೃಹ ಸದಸ್ಯರಿಗೆ ವಿ.ಡಿ ಸಾವರ್ಕರ್(ಕೈದಿ ಸಂಖ್ಯೆ 32778) ಬರೆದುಕೊಂಡ ಅರ್ಜಿ.

‘‘ನಾನು ಈ ಕೆಳಗಿನ ವಿಷಯಗಳನ್ನು ತಮ್ಮ ದಯಾಪೂರ್ಣ ಪರಿಗಣನೆಗಾಗಿ ಸಲ್ಲಿಸುತ್ತಿದ್ದೇನೆ’’. 1) 1911ರ ಜೂನ್‌ನಲ್ಲಿ ನಾನು ಇಲ್ಲಿಗೆ ಬಂದಾಗ ನನ್ನ ತಂಡ (ಪಾರ್ಟಿ)ದ ಜತೆಗಿದ್ದ ಇತರ ಕೈದಿಗಳೊಂದಿಗೆ ನನ್ನನ್ನು ಚೀಫ್ ಕಮಿಶನರ್‌ರ ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ನನ್ನನ್ನು ‘‘ಡಿ’’ ಅಂದರೆ ‘‘ಡೇಂಜರಸ್ (ಅಪಾಯಕಾರಿ) ಎಂದು ವರ್ಗೀಕರಿಸಲಾಯಿತು ಇತರ ಕೈದಿಗಳನ್ನು ‘‘ಡಿ’’ ವರ್ಗಕ್ಕೆ ಸೇರಿಸಲಿಲ್ಲ. ಆಮೇಲೆ ನನ್ನನ್ನು ಪೂರ್ತಿ ಆರು ತಿಂಗಳ ಕಾಲ ಏಕಾಂಗಿಯಾಗಿ ಸೆರೆಮನೆಯಲ್ಲಿಡಲಾಯಿತು. ಇತರ ಕೈದಿಗಳನ್ನು ಹೀಗೆ ಏಕಾಂಗಿಯಾಗಿ ಸೆರೆಯಲ್ಲಿಡಲಿಲ್ಲ. ಆ ಅವಧಿಯಲ್ಲಿ ನನ್ನ ಕೈಗಳಿಂದ ರಕ್ತ ಒಸರುತ್ತಿದ್ದರೂ, ನನಗೆ ತೆಂಗಿನನಾರನ್ನು ಗುದ್ದಿ ಹದಮಾಡುವ ಕೆಲಸ (ಶಿಕ್ಷೆ) ನೀಡಲಾಯಿತು.

ಇದು ಜೈಲಿನಲ್ಲಿ ಕೈದಿಗಳಿಗೆ ನೀಡುವ ಅತ್ಯಂತ ಕಠಿಣವಾದ ಕೆಲಸ. ಆ ಸಂಪೂರ್ಣ ಅವಧಿಯಲ್ಲಿ ನನ್ನ ನಡತೆ ಅತ್ಯುತ್ತಮವಾಗಿದ್ದರೂ ಕೂಡ, ಆರು ತಿಂಗಳ ಅಂತ್ಯದಲ್ಲಿ ನನ್ನನ್ನು ಜೈಲಿನಿಂದ ಬಿಡುಗಡೆಮಾಡಲಿಲ್ಲ; ನನ್ನ ಜತೆ ಬಂದಿದ್ದ ಇತರ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಆ ದಿನದಿಂದ ಇವತ್ತಿನ ವರೆಗೆ ನಾನು ನನ್ನ ನಡತೆಯಲ್ಲಿ ಎಷ್ಟು ಉ್ತತಮವಾಗಿಸಲು ಸಾಧ್ಯವೋ ಅಷ್ಟು ಉತ್ತಮವಾಗಿರಲು ಪ್ರಯತ್ನಿಸಿದ್ದೇನೆ. (2) ನಾನು ಭಡ್ತಿಗಾಗಿ ಅರ್ಜಿಸಲ್ಲಿಸಿದಾಗ, ನಾನೊಬ್ಬ ವಿಶೇಷ ದರ್ಜೆ(ಸ್ಪೆಶಲ್ ಕ್ಲಾಸ್) ಯ ಕೈದಿಯಾಗಿರುವುದರಿಂದ ನನಗೆ ಭಡ್ತಿ ನೀಡಲು ಸಾಧ್ಯವಿಲ್ಲವೆಂದು ಹೇಳಲಾಯಿತು.

(3) ಕೈದಿಗಳಲ್ಲಿ (ಕೇಸ್‌ಮೆನ್) ಬಹುಸಂಖ್ಯಾತರನ್ನು ಹೊರಕಳುಹಿಸಿದಾಗ, ನಾನು ನನ್ನ ಬಿಡುಗಡೆಗಾಗಿ ವಿನಂತಿಸಿಕೊಂಡೆ. ಆದರೆ ನನಗೆ ಎರಡೋ ಮೂರೋ ಬಾರಿಯಷ್ಟೆ ಛಡಿಏಟು ನೀಡಲಾಗಿತ್ತಾದರೂ(ಕೇನ್ಡ್) ಬಿಡುಗಡೆ ಗೊಂಡವರಲ್ಲಿ ಒಂದು ಡಝನ್ ಅಥವಾ ಅದಕ್ಕೂ ಹೆಚ್ಚು ಬಾರಿ ಛಡಿಏಟು ತಿಂದಿದ್ದವರಿದ್ದರೂ ಕೂಡ, ನನ್ನನ್ನು ಬಿಡುಗಡೆ ಮಾಡಲಿಲ್ಲ; ಯಾಕೆಂದರೆ ನಾನು ಅವರ ಕೇಸ್‌ಮೆನ್ ಆಗಿದ್ದೆ.

(4) ನಾನು ಭಾರತ ಜೈಲುಗಳಲ್ಲಿರುತ್ತಿದ್ದರೆ ಇಷ್ಟು ಹೊತ್ತಿಗಾಗಲೇ ನನ್ನ ಶಿಕ್ಷೆಯಲ್ಲಿ ಕಡಿತ (ರೆಮಿಶನ್) ಮನೆಗೆ ಇನ್ನಷ್ಟು ಹೆಚ್ಚು ಪತ್ರಗಳನ್ನು ಕಳುಹಿ ಸಬಹುದಾಗಿತ್ತು. ಅವರ ಭೇಟಿಗೆ ಅವಕಾಶ ಸಿಗುತ್ತಿತ್ತು. ನಾನೊಬ್ಬ ಶುದ್ಧ ಹಾಗೂ ಸರಳ ಟ್ರಾನ್ಸ್‌ಪೋರ್ಟಿ(ದಂಡ ವಸಾಹತಿಗೆ ಕಳುಹಿಸಲ್ಪಟ್ಟ ಕೈದಿ)ಆಗಿರುತ್ತಿದ್ದಲ್ಲಿ ಇಷ್ಟು ಹೊತ್ತಿಗಾಗೇ ನನ್ನ ಬಿಡುಗಡೆಯಾಗಿರುತ್ತಿತ್ತು.

(5) ಆದ್ದರಿಂದ ಘನವಂತರಾದ ತಾವು ನಾನೀಗ ಇರುವ ಈ ಅನಿರೀಕ್ಷಿತ ಪರಿಸ್ಥಿತಿಯನ್ನು,ಒಂದೋ ನನ್ನನ್ನು ಭಾರತೀಯ ಜೈಲುಗಳಿಗೆ ಕಳುಹಿಸುವ ಮೂಲಕ ಅಥವಾ ಇತರ ಯಾವುದೇ (ಟ್ರಾನ್ಸ್ ಪೋರ್ಟಿನ) ಕೈದಿಯ ತರಹ ನನ್ನನ್ನು ಕೂಡ ನಡೆಸಿಕೊಳ್ಳುವ ಮೂಲಕ, ಈ ಪರಿಸ್ಥಿತಿಯನ್ನು ಕೊನೆಗೊ ಳಿಸಬೇಕೆಂದು ವಿನಂತಿಸಿಕೊಳ್ಳತ್ತೇನೆ. ಈ ಜೈಲಿನಲ್ಲಿ ಶಾಶ್ವತವಾಗಿ ನನ್ನನ್ನು ಬಂಧಿಸಿಡುವ ಯೋಜನೆಯು ನನಗೆ ಬದುಕಿ ಉಳಿಯುವ ಹಾಗೂ ಭರವಸೆ ಹೊಂದಿರುವ ಯಾವುದೇ ಸಾಧ್ಯತೆ ಇಲ್ಲವೆಂದು ಹತಾಶೆ ಉಂಟು ಮಾಡುತ್ತದೆ. ಒಂದು ಅವಧಿಯ ಕೈದಿ (ಟರ್ಮ್‌ಕಾನ್ವಿಕ್ಟ್)ಗಳ ವಿಷಯ ಬೇರೆ; ಆದರೆ ಸ್ವಾಮೀ, ನನ್ನ ಮುಂದೆ ನನ್ನನ್ನು ದಿಟ್ಟಿಸಿನೋಡುತ್ತಿರುವ 50 ವರ್ಷಗಳ ಬದುಕು ಇದೆ. ಇಷ್ಟೊಂದು ವರ್ಷಗಳನ್ನು ಜೈಲಿನ ನಾಲ್ಕುಗೋಡೆಗಳೊಳಗೆ ಬಂಧಿತನಾಗಿ ಕಳೆಯುವ ನೈತಿಕ ಶಕ್ತಿ ನನಗೆ ಎಲ್ಲಿಂದ ಹೇಗೆ ಬರಲು ಸಾಧ್ಯ? ಅದು ಕೂಡ ಅತ್ಯಂತ ಕುಖ್ಯಾತ ಅನೈತಿಕ (ವೈಲೆಸ್ಟ್) ಕೈದಿಗಳಿಗೆ ನೀಡಲಾಗುವ ರಿಯಾಯಿತಿ ಗಳನ್ನು ಕೂಡ ನನಗೆ ನಿರಾಕರಿಸಿರುವಾಗ ಈ ಶಕ್ತಿ ಹೇಗೆ ಬರಲು ಸಾಧ್ಯ? ಒಂದೋ ನನ್ನನ್ನು ದಯಮಾಡಿ ಭಾರತದ ಜೈಲಿಗೆ ಕಳುಹಿಸಿ ಯಾಕೆಂದರೆ ಅಲ್ಲಿ ನನಗೆ ಈ ಕೆಳಗಿನವು ದೊರಕುತ್ತವೆ.

(ಎ) ರೆಮಿಶನ್ (ಬಿ)ಪ್ರತೀ ನಾಲ್ಕು ತಿಂಗಳಿಗೊಮ್ಮೆ ನನ್ನವರು ಬಂದು ನನ್ನನ್ನು ಭೇಟಿ ಮಾಡುವ ಅವಕಾಶ. (ಸಿ) ಮತ್ತು ಎಲ್ಲಕಿಂತ ಹೆಚ್ಚಾಗಿ 14 ವರ್ಷಗಳಲ್ಲಿ ಬಿಡುಗಡೆಯಾಗುವ ಕಾನೂನು ರೀತ್ಯಾ ಅಲ್ಲವಾದರೂ ನೈತಿಕವಾದ ಹಕ್ಕು (ಡಿ) ಮತ್ತು ಹೆಚ್ಚು ಪತ್ರಗಳು ಹಾಗೂ ಇತರ ಚಿಕ್ಕಪುಟ್ಟ ಅನುಕೂಲತೆಗಳು.

ಅಥವಾ ನನ್ನನ್ನು ಭಾರತಕ್ಕೆ ಕಳುಹಿಸುವುದು ಅಸಾಧ್ಯವಾದಲ್ಲಿ, ನನ್ನನ್ನು ಬಿಡು ಗಡೆ ಮಾಡಿ ಹೊರಗೆ ಕಳುಹಿಸಬೇಕು- ಇತರ ಕೈದಿಗಳ ಹಾಗೆ ನನ್ನ ಟಿಕೆಟ್ ರಜೆ ಹಾಗೂ ನನ್ನ ಕುಟುಂಬವನ್ನು ಇಲ್ಲಿಗೆ ಕರೆತರುವ 5 ವರ್ಷಗಳ ನಂತರದ ಭೇಟಿಗಳ ಭರವಸೆಯೊಂದಿಗೆ. ನಾನಿದನ್ನು ವಿನಂತಿಸಿಕೊಳ್ಳಬೇಕಾಗಿ ಬಂದಿರು ವುದು ಶೋಚನೀಯ- ಇದು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು! ಕೊನೆಯದಾಗಿ, ನಾನು 1911ರಲ್ಲಿ ಕಳುಹಿಸಿದ್ದ ಕ್ಷಮಾದಾನದ ಅರ್ಜಿಯನ್ನುಕರುಣೆ ತೋರಿ ಪರಾಮರ್ಶಿಸಿ, ಅದನ್ನು ಭಾರತ ಸರಕಾರಕ್ಕೆ ಕಳುಹಿಸುವಂತೆ ಶಿಫಾರಸು ಮಾಡುವಂತೆ ನಾನು ತಮಗೆ ಜ್ಞಾಪಿಸಲೆ? ಭಾರತದ ರಾಜಕಾರಣ ದಲ್ಲಾಗಿರುವ ಇತ್ತೀಚಿನ ಬೆಳವಣಿಗೆಗಳು ಸಂವಿಧಾನಾತ್ಮಕ ವಿಧಾನಗಳ ಬಾಗಿಲನ್ನು ಪುನಃ ತೆರೆದಿವೆ. ಈಗ ತನ್ನ ಹೃದಯದಲ್ಲಿ ಭಾರತದ ಒಳಿತು ಮತ್ತು ಮಾನವೀಯತೆ ಇರುವ ಯಾರೂ ಕೂಡ, 1906-1907ರಲ್ಲಿ ನಮ್ಮನ್ನು ಆಕರ್ಷಿಸಿದ ಮತ್ತು ಉದ್ರೇಕಿತ ಮತ್ತು ಕೆಟ್ಟ(ಹೋಪ್‌ಲೆಸ್) ಪರಿಸ್ಥಿತಿ ಯ ಮುಳ್ಳಿನ ಹಾದಿಗಳ ಮೇಲೆ ಯಾರೂ ಕಾಲಿಡಲಾರರು. ನಾವು ಜೈಲು ಗಳಲ್ಲಿರುವ ವರೆಗೆ ಭಾರತದಲ್ಲಿ ಬ್ರಿಟಿಷ್ ದೊರೆಗಳಿಗೆ ನಿಷ್ಠರಾದ ನೂರಾರು ಹಾಗೂ ಸಾವಿರಾರು ಪ್ರಜೆಗಳ ಮನೆಗಳಲ್ಲಿ ನಿಜವಾದ ಸಂತೋಷ ಹಾಗೂ ಆನಂದವಿರಲು ಸಾಧ್ಯವಿಲ್ಲ, ಯಾಕೆಂದರೆ ರಕ್ತವು ನೀರಿಗಿಂತ ದಪ್ಪವಾಗಿದೆ; ಆದರೆ ನಮ್ಮನ್ನು ಬಿಡುಗಡೆ ಮಾಡಿದಲ್ಲಿ ಜನರು ಸಹಜವಾಗಿಯೇ ಸರಕಾರಕ್ಕೆ ಸಂತೋಷ ಹಾಗೂ ಕೃತಜ್ಞತೆಯ ಜೈಕಾರ ಹಾಕುತ್ತಾರೆ. ಛಡಿಏಟು ನೀಡಿ ಬೈದು ದೂಷಿಸಿ ಪ್ರತಿಕಾರ ಮಾಡುವುದಕ್ಕಿಂತ ಹೆಚ್ಚಾಗಿ ಹೇಗೆ ಕ್ಷಮಿಸಿ ಸರಿಪಡಿಸ ಬಹುದೆಂದು ಸರಕಾರಕ್ಕೆ ಗೊತ್ತಿದೆ. ಅಲ್ಲದೆ ನಾನು ಸಾಂವಿಧಾನಿಕ ಹಾದಿಗೆ ಪರಿವರ್ತ ನೆಗೊಳ್ಳುವುದರಿಂದ, ಒಂದು ಕಾಲದಲ್ಲಿ ನನ್ನನ್ನು ತಮ್ಮ ಮಾರ್ಗದರ್ಶಿ (ಗೈಡ್) ಎಂದು ಪರಿಗಣಿಸುತ್ತಿದ್ದ ಆ ಎಲ್ಲ ಹಾದಿತಪ್ಪಿದ ಯುವಕರು ಮರಳಿ ಸರಿದಾರಿಗೆ ಬರುತ್ತಾರೆ. ಸರಕಾರ ಯಾವುದೇ ರೀತಿಯಲ್ಲಿ ನಾನು ಅದರ ಸೇವೆಮಾಡಬೇಕೆಂದು ಹೇಳಿದರೂ ಆ ರೀತಿಯಲ್ಲಿ ಸರಕಾರದ ಸೇವೆಮಾಡಲು ನಾನು ಸಿದ್ಧನಿದ್ದೇನೆ, ಯಾಕೆಂದರೆ ನನ್ನ ಪರಿವರ್ತನೆ ಪ್ರಜ್ಞಾಪೂರ್ವಕವಾ ಗಿರುವುದರಿಂದ ( ಕಾನ್ಸಿಯಸ್) ನನ್ನ ಭವಿಷ್ಯದ ನಡತೆ ಕೂಡ ಪ್ರಜ್ಞಾಪೂರ್ವಕ ವಾಗಿಯೇ ಇರುತ್ತದೆಂದು ಭಾವಿಸುತ್ತೇನೆ. ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿದಲ್ಲಿ ಏನು ಉಪಯೋಗ, ಲಾಭವಾಗಬಹುದೋ ಅದಕ್ಕೆ ಹೋಲಿಸಿದರೆ ನನ್ನನ್ನು ಜೈಲಿನಲ್ಲಿಡುವುದರಿಂದ (ಸರಕಾರಕ್ಕೆ) ಯಾವ ಉಪಯೋಗವೂ ಆಗಲಾರದು. ದೇವರು ಮಾತ್ರ ಕರುಣೆ ತೋರಬಲ್ಲ ಮತ್ತು ಆದ್ದರಿಂದ, ಐಷಾರಾಮಿ ಜೀವನ ನಡೆಸಲಿಕ್ಕಾಗಿ ಮನೆ ತೊರೆದು ಹೋದ ದುಂದುಗಾರ ಮಗ (ಪ್ರಾಡಿಗಲ್ ಸನ್) ಸರಕಾರವೆಂಬ ಪೋಷಕರ ಮನೆಗೆ ಅಲ್ಲದೆ ಬೇರೆ ಇನ್ನೆಲ್ಲಿಗೆ ತಾನೆ ಮರಳಲು ಸಾಧ್ಯ?

ಘನವೆತ್ತ ತಾವು, ಮಹಾಸ್ವಾಮಿ, (ಯುವರ್ ಆನರ್) ಈ ಅಂಶಗಳನ್ನು ಪರಿಗಣಿಸುವಿರಾಗಿ ಭರವಸೆ ಇಟ್ಟುಕೊಂಡಿದ್ದೇನೆ.’’

ಕೃಪೆ : ಜನ್ ತಾ ಕಾ ರಿಪೋರ್ಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ