ಶರದ್ ಯಾದವ್ ನಮ್ಮ ನಾಯಕ; ಬಿಜೆಪಿಯ ವಿರುದ್ಧ ಹೋರಾಡಲು ಲಾಲು ಕರೆ

Update: 2017-07-30 11:02 GMT

ಪಾಟ್ನ ಜು.30: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ನಿತೀಶ್ ಕುಮಾರ್ ಗೆ ತಿರುಗೇಟು ನೀಡಲು ಆರ್‍ಜೆಡಿ  ನಾಯಕ ಲಾಲು ಪ್ರಸಾದ್ ಯಾದವ್ ಸಿದ್ಧರಾಗಿದ್ದಾರೆ.

 ಬಿಜೆಪಿಯ ವಿರುದ್ಧ  ಹೋರಾಟಕ್ಕೆ ನೇತೃತ್ವವನ್ನು ನೀಡಬೇಕೆಂದು ಆಗ್ರಹಿಸಿ ಶರದ್ ಯಾದವ್ ಈ ಹಿಂದೆ ಲಾಲು ಪ್ರಸಾದ್ ಯಾದವ್ ಶರದ್ ಯಾದವ್‍ರಿಗೆ ಫೋನ್ ಮಾಡಿದ್ದಾರೆ. ನಂತರ ಮಾಧ್ಯಮಗಳ ಮುಂದೆ ಶರದ್ ಯಾದವ್ ನಮ್ಮ ನಾಯಕ ಎಂದು ಲಾಲುಯಾದವ್ ಪುನರುಚ್ಚರಿಸಿದ್ದಾರೆ.

ಬಿಜೆಪಿಯ ವಿರುದ್ಧ ಹೋರಾಟಕ್ಕೆ ನೇತೃತ್ವ ನೀಡುವಂತೆ ನಾನುಶರದ್‍ಜಿಯವರಲ್ಲಿಕೇಳಿಕೊಂಡಿದ್ದೇನೆ. ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವ ಶರದ್ ಯಾದವ್‍ರಿಗೆ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ತೀವ್ರ ವಿರೋಧವಿದೆ. ಆದರೆ, ಈ ವಿಷಯದಲ್ಲಿ ಶರದ್‍ ಯಾದವ್ ಯಾವುದೇ ಬಹಿರಂಗ ಹೇಳಿಕೆಯನ್ನು  ಈವರೆಗೂ ನೀಡಿಲ್ಲ.

 ಬುಧವಾರ  ಕಾಂಗ್ರೆಸ್, ಆರ್‍ಜೆಡಿಯ ಮೈತ್ರಿಯನ್ನು ತೊರೆದು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಮರುದಿವಸ ಬಿಜೆಪಿಯಬೆಂಬಲದೊಂದಿಗೆ ನಿತೀಶ್ ಪುನಃ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾದ ಲಾಲುರ ಪುತ್ರ ಉಪಮುಖ್ಯಮಂತ್ರಿ ತೇಜಸ್ವಿಯಾದವ್ ರಾಜೀನಾಮೆ ನೀಡಲು  ನಿರಾಕರಿಸಿದ್ದರಿಂದ ನಿತೀಶ್ ಆರ್‍ಜೆಡಿ-ಕಾಂಗ್ರೆಸ್‍ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News