ಆಧಾರ್-ಪಾನ್ ಕಾರ್ಡ್ ಲಿಂಕ್: ಕೊನೆಯ ದಿನಾಂಕ ವಿಸ್ತರಣೆ

Update: 2017-07-31 16:23 GMT

ಹೊಸದಿಲ್ಲಿ, ಜು.31: ಆಧಾರ್ ಕಾರ್ಡನ್ನು ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೇಂದ್ರ ಸರಕಾರ ವಿಸ್ತರಿಸಿದೆ.

ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಆಗಸ್ಟ್ 31 ಕೊನೆಯ ದಿನಾಂಕ ಎಂದು ನಿರ್ಧರಿಸಲಾಗಿದೆ. ಈ ಬಗ್ಗೆ ಹಣಕಾಸು ಸಚಿವಾಲಯ ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಆಗಸ್ಟ್ 31ರ ಮೊದಲು ಆಧಾರ್ ಹಾಗೂ ಪಾನ್ ಕಾರ್ಡನ್ನು ಲಿಂಕ್ ಮಾಡಬೇಕು ಎಂದಿದೆ.

2016-17ನೇ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್)ಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು ಜು.31 ರಿಂದ ಆ.5ಕ್ಕೆ ವಿಸ್ತರಿಸ ಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News