×
Ad

ವಿಮಾನದ ಗಾಜು ಒಡೆದರೂ ಸುರಕ್ಷಿತ ಭೂಸ್ಪರ್ಶ

Update: 2017-08-02 22:43 IST

ಇಸ್ತಾಂಬುಲ್, ಆ. 2: ಆಲಿಕಲ್ಲು ಬಿರುಗಾಳಿಯಿಂದಾಗಿ ವಿಮಾನದ ಗಾಜು ಒಡೆದು ರನ್‌ವೇ ಗೋಚರಿಸದಿದ್ದರೂ, ವಿಮಾನವನ್ನು ಯಶಸ್ವಿಯಾಗಿ ಭೂಸ್ಪರ್ಶ ಮಾಡಿದ ಯುಕ್ರೇನ್ ಪೈಲಟ್ ಒಬ್ಬರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 ವಿಮಾನ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ಅದರ ಮುಂಭಾಗಕ್ಕೆ ಆಲಿಕಲ್ಲು ಬಿರುಗಾಳಿ ಅಪ್ಪಳಿಸಿ ಭಾರೀ ಹಾನಿ ಸಂಭವಿಸಿತು. ಆದರೂ ಧೃತಿಗೆಡದ ಕ್ಯಾಪ್ಟನ್ ಅಲೆಕ್ಸಾಂಡರ್ ಅಕೊಪೊವ್ 121 ಜನರನ್ನು ಒಯ್ಯುತ್ತಿದ್ದ ವಿಮಾನವನ್ನು ಇಸ್ತಾಂಬುಲ್‌ನ ಅಟಾತುರ್ಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದರು ಎಂದು ‘ಡೇಲಿ ಮೇಲ್’ ವರದಿ ಮಾಡಿದೆ. ಘಟನೆ ಜುಲೈ 27ರಂದು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News