30 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಜರ್ಮನ್ ಆರೋಹಿ ಪತ್ತೆ
Update: 2017-08-02 22:48 IST
ಜಿನೇವ (ಸ್ವಿಟ್ಸರ್‌ಲ್ಯಾಂಡ್), ಆ. 2: ಮೂವತ್ತು ವರ್ಷಗಳ ಹಿಂದೆ ಸ್ವಿಟ್ಸರ್‌ಲ್ಯಾಂಡ್‌ನ ಆಲ್ಪ್ಸ್ ಪರ್ವತವನ್ನು ಏರುವ ವೇಳೆ ನಾಪತ್ತೆಯಾಗಿದ್ದ ಜರ್ಮನ್ ಪರ್ವತಾರೋಹಿಯೊಬ್ಬರ ಮೃತದೇಹ ನೀರ್ಗಲ್ಲೊಂದರಲ್ಲಿ ಹೂತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.
ದಕ್ಷಿಣ ಸ್ವಿಟ್ಸರ್‌ಲ್ಯಾಂಡ್‌ನಲ್ಲಿರುವ ಲ್ಯಾಗಿನ್‌ಹಾರ್ನ್ ಪರ್ವತವನ್ನು ಏರುತ್ತಿದ್ದ ಇಬ್ಬರು ಪರ್ವತಾರೋಹಿಗಳು ಜುಲೈ 25ರಂದು ಶವ ಪತ್ತಹಚ್ಚಿದ್ದಾರೆ.
ಮೃತ ಪರ್ವತಾರೋಹಿಯು 1943ರಲ್ಲಿ ಹುಟ್ಟಿದ ಜರ್ಮನ್ ರಾಷ್ಟ್ರೀಯನೆಂದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರು 1987 ಆಗಸ್ಟ್ 11ರಂದು ನಾಪತ್ತೆಯಾಗಿದ್ದರು.