ಮಅದನಿಯವರಿಗೆ ಭದ್ರತೆ ಒದಗಿಸಲು ಸರಕಾರ ಸಿದ್ಧ: ಸಿದ್ದರಾಮಯ್ಯರಿಗೆ ಕೇರಳ ಸಿಎಂ ಪತ್ರ

Update: 2017-08-03 08:39 GMT

ತಿರುವನಂತಪುರಂ,ಆ.3: ಸುಪ್ರೀಂಕೋರ್ಟು ಅನುಮತಿ ನೀಡಿದ ಪ್ರಕಾರ ಪುತ್ರನ ಮದುವೆಯಲ್ಲಿ ಭಾಗವಹಿಸಲು ಬರುವ ಪಿಡಿಪಿ ನಾಯಕ ಅಬ್ದುನ್ನಾಸರ್ ಮಅದನಿಯವರಿಗೆ ಕೇರಳದಲ್ಲಿ ಭದ್ರತಾ ವ್ಯವಸ್ಥೆ ಒದಗಿಸಲು ರಾಜ್ಯಸರಕಾರ ಸಿದ್ಧವಿದೆ. ಅದಕ್ಕಾಗಿ ಕರ್ನಾಟಕ ಸರಕಾರ ಕೇಳಿದ ಮೊತ್ತವನ್ನು ಕಡಿಮೆ ಮಾಡಬೇಕೆಂದು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ತಿಳಿಸಿದ್ದಾರೆ.

 ಬೆಂಗಳೂರಿನ ಜೈಲಿನಲ್ಲಿ ವಿಚಾರಣಾ ಕೈದಿಯಾಗಿರುವ  ಮಅದನಿಯವರಿಗೆ ವೃದ್ಧ ತಂದೆತಾಯಿಯನ್ನು ಸಂದರ್ಶಿಸಲು ಎನ್‍ಐಎ ಕೋರ್ಟು ಅನುಮತಿ ನೀಡಿತ್ತು. ಆಗಸ್ಟ್ ಒಂಬತ್ತಕ್ಕೆ ನಡೆಯುವ ಪುತ್ರನ ಮದುವೆಯಲ್ಲಿ ಭಾಗವಹಿಸಲು ಸುಪ್ರೀಂಕೋರ್ಟು ಅನುಮತಿ ನೀಡಿದೆ. ಆದರೆ, ಮಾನವೀಯ ನೆಲೆಯಲ್ಲಿ ಸುಪ್ರೀಂಕೋರ್ಟು ನೀಡಿರುವ ತೀರ್ಪನ್ನು ಬುಡಮೇಲುಗೊಳಿಸುವ ನಿಬಂಧನೆಯನ್ನು ಕರ್ನಾಟಕ ಪೊಲೀಸರು ಹೇರಿದ್ದಾರೆ. ಮಅದನಿಯ ಕೇರಳ ಯಾತ್ರೆಯ ಭದ್ರತೆಗಾಗಿ ಕರ್ನಾಟಕ ಪೊಲೀಸರು  14, 79,876 ರೂಪಾಯಿ ನಿಗದಿಗೊಳಿಸಿದ್ದಾರೆ. ಮಅದನಿ ಕೇರಳಕ್ಕೆ ಭೇಟಿ ನೀಡುವುದನ್ನು ತಡೆಯುವ ಉದ್ದೇಶ ಇದರ ಹಿಂದಿದೆಯೇ ಎನ್ನುವ ಸಂದೇಹವನ್ನು ಪತ್ರದಲ್ಲಿ ಕೇರಳ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ.

2013 ಮತ್ತು 2016ರಲ್ಲಿ ಮೂರು ಬಾರಿ ಮಅದನಿ ವಿಚಾರಣಾ ಕೈದಿಯಾಗಿದ್ದು, ಕೇರಳಕ್ಕೆ ಭೇಟಿ ನೀಡಿದ್ದಾರೆ. ಮೊದಲ ಎರಡು ಬಾರಿಯ ಭೇಟಿಯವೇಳೆ ಹಣ ಕೇಳಿಲ್ಲ. ಮೂರನೆ ಬಾರಿ ಭೇಟಿ ನೀಡಿದಾಗ ಐವತ್ತು ಸಾವಿರ ರೂಪಾಯಿ ಭರಿಸಲು ಹೇಳಲಾಯಿತು. ಆದರೆ ಈಸಲ ಕೇಳಿದ ಭಾರೀಮೊತ್ತ ಮಅದನಿಗೆ ನ್ಯಾಯ ನಿರಾಕರಿಸಿದ್ದಕ್ಕೆ ಸಮಾನವಾಗಿದೆ. ಕೇರಳದಲ್ಲಿ ಭದ್ರತೆಯ ಹೊಣೆಯನ್ನು ರಾಜ್ಯ ಸರಕಾರ ವಹಿಸಿಕೊಳ್ಳಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರಿಗೆ ಹೆಚ್ಚು ಖರ್ಚುವೆಚ್ಚ ಆಗುವುದಿಲ್ಲ. ಆದ್ದರಿಂದ ಬೆಂಗಳೂರಿನ ಪೊಲೀಸ್ ಕಮಿಷನರ್ ಕೇಳಿದ ಮೊತ್ತವನ್ನು ಕಡಿಮೆ ಮಾಡಬೇಕುಮತ್ತು ಸುಪ್ರೀಂಕೋರ್ಟಿನ ತೀರ್ಪಿನ ಇಂಗಿತವನ್ನು ಅರಿತುಕೊಂಡು ಮಅದನಿಗೆ ತಂದೆತಾಯಿನ್ನುಭೇಟಿಯಾಗಲು  ಮತ್ತು ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿನಂತಿಸಿದ್ದಾರೆ.

ಮಅದನಿ ವಿಷಯದಲ್ಲಿ ಪಿಡಿಪಿ ನಾಯಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪುಂದುರ ಸಿರಾಜ್‍ರ ನೇತೃತ್ವದಲ್ಲಿ ನಿಯೋಗ ಪ್ರತಿಪಕ್ಷನಾಯಕ ರಮೇಶ್ ಚೆನ್ನಿತ್ತಲರನ್ನುಕೂಡಾ  ಭೇಟಿಯಾಗಿದೆ. ಪಿಣರಾಯಿ ವಿಜಯನ್, ಸಿದ್ದರಾಮಯ್ಯರೊಂದಿಗೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಫೋನ್ ಮೂಲಕ ಈ ವಿಷಯವನ್ನುಚರ್ಚಿಸಿದ್ದಾರೆ. ಮಅದನಿ ಕೇರಳಕ್ಕೆ ಬಂದಾಗ ಭದ್ರತೆ ವ್ಯವಸ್ಥೆ ಮಾಡಲು ಸಿದ್ಧವೆಂದು ಪಿಣರಾಯಿ ವಿಜಯನ್ ಚೆನ್ನಿತ್ತಲರಿಗೆ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News