‘ಆಧಾರ್’ ಭಾಷೆ ಕಲಿಯುವವರಿಗಾಗಿ ಒಂದು ಪದಕೋಶ

Update: 2017-08-05 18:44 GMT

ಆಧಾರ್ ಭಾಷೆ (ಆಧಾರ್ ಸ್ಪೀಕ್)ಗೆ ಒಂದು ಅಧಿಕೃತ ನಿಘಂಟು ಇಲ್ಲ. ಆದ್ದರಿಂದಲೇ ಅದರ ಬಗ್ಗೆ ತಿಳಿದಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ನಿಮಗೆ ಸಂಪೂರ್ಣ ಶಬ್ದಕೋಶ ತಿಳಿದಿರದಿದ್ದರೆ, ನಿಮಗೆ ಅದರ ಪ್ರಪಂಚ ಅರ್ಥವಾಗುವುದಿಲ್ಲ. ಚರ್ಚೆ ಏನೆಂದೂ ನಿಮಗೆ ಗೊತ್ತಾಗುವುದಿಲ್ಲ.

ಆದ್ದರಿಂದ ಅದರ ಬಗ್ಗೆ ತಿಳಿಯಲು ಬಯಸುವವರಿ ಗಾಗಿ ಇಲ್ಲಿ ಒಂದು ಪದಕೋಶ (ಗ್ಲೋಸರಿ) ಇದೆ. ಇದರ ಉದ್ದೇಶ, ಹೊಸತಾಗಿ ಆಧಾರ್ ಬಗ್ಗೆ ತಿಳಿದುಕೊಳ್ಳುವವರಿಗೆ ಆಧಾರ್ ಭಾಷೆಗೆ ಮೊದಲ ಮುನ್ನುಡಿಯನ್ನು ಒದಗಿಸುವುದು, ಅಷ್ಟೇ.

ಡಿಸ್‌ಕ್ಲೈಮರ್: ಇದೊಂದು ಅಧಿಕೃತ ನಿಘಂಟು ಅಲ್ಲ. ಯಾವುದೇ ವಾರಂಟಿಗಳಿಲ್ಲದೆ ಇದನ್ನು ಇದ್ದಕ್ಕಿದ್ದ ರೂಪದಲ್ಲೇ ಬಿಡುಗಡೆ ಮಾಡಲಾಗಿದೆ.

ಆಧಾರ್ ಎಂದರೆ ಬೆಂಬಲ, ನೆರವು, ಸಹಾಯ. ಪನಾಮದ ಬದಲಿಗೆ, ಅದರ ಜಾಗದಲ್ಲಿ, ಹಣದ ಅಕ್ರಮ ಸಾಗಣೆಯನ್ನು ತಡೆದು ಒಂದು ತೆರಿಗೆ-ರಕ್ಷಣಾ ಸ್ಥಳವನ್ನು ಸೃಷ್ಟಿಸಲು ಸಹಾಯ ಮಾಡುವ ಒಂದು ಕಾರ್ಯಕ್ರಮ. ಒಂದೊಮ್ಮೆ ಆಧಾರ್ ಸಂಖ್ಯೆಗೆ ಒಂದು ಸಂಕ್ಷಿಪ್ತ ರೂಪ (ಶಾರ್ಟ್ ಫಾರ್ಮ್)ವಾಗಿ ಬಳಸಲ್ಪಡುವ ಒಂದು ಶಬ್ದ.

ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AEPS)

ನಿಮ್ಮ ಆಧಾರ್ ಸಂಖ್ಯೆಗೆ ವರ್ಗಾವಣೆಯಾಗುವ ಹಣವನ್ನು ಸ್ವೀಕರಿಸುವ ಬ್ಯಾಂಕ್ ಖಾತೆಯನ್ನು ಬಚ್ಚಿಡುವ (ಹೈಡ್ ಮಾಡುವ) ಒಂದು ಮಾಂತ್ರಿಕ (ಮ್ಯಾಜಿಕಲ್) ಪಾವತಿ ವ್ಯವಸ್ಥೆ.

ಸಾಂಪ್ರದಾಯಿಕ ಡಿಜಿಟಲ್ ಮನಿ ಟ್ರಾನ್ಸ್‌ಫರ್‌ಗಿಂತ ಬೇರೆಯಾದ ಈ ವ್ಯವಸ್ಥೆಯಲ್ಲಿ ಮಾಡುವ ಡಿಜಿಟಲ್ ಪಾವತಿಗಳು ಹಣದ ಮೂಲ ಮತ್ತು ಹಣ ಯಾರಿಗೆ ಹೋಗಿದೆ (ಡೆಸ್ಟಿನೇಶನ್) ಎನ್ನುವುದನ್ನು ಗುಪ್ತವಾಗಿ ಇಡಬಲ್ಲವು.

ಆಧಾರ್ ಆ್ಯಕ್ಟ್:

‘ದಿ ಆಧಾರ್ (ಟಾರ್ಗೆಟೆಡ್ ಡೆಲಿವರಿ ಆಫ್ ಫೈನಾನ್ಶಿಯಲ್ ಆ್ಯಂಡ್ ಅದರ್ ಸಬ್ಸಿಡೀಸ್, ಬೆನಿಫಿಟ್ಸ್ ಆ್ಯಂಡ್ ಸರ್ವಿಸಸ್) ಆ್ಯಕ್ಟ್-2016’ ಎನ್ನುವುದಕ್ಕೆ ಸಾಮಾನ್ಯವಾದ ಪದಗಳು ಇವು. ಭಾರತದಲ್ಲಿ ವಾಸಿಸುವ ವ್ಯಕ್ತಿಗಳಿಗೆ ವಿಶಿಷ್ಟ ಗುರುತು ಸಂಖ್ಯೆಗಳನ್ನು ನೀಡುವ ಮತ್ತು ಆ ಸಂಖ್ಯೆಗಳನ್ನು ತಟಸ್ಥಗೊಳಿಸುವ (ಡಿಆ್ಯಕ್ಟಿವೇಟ್ ಮಾಡುವ) ಭಾರೀ ಅಧಿಕಾರ ಹೊಂದಿರುವುದು ಕೂಡ ಈ ಕಾಯ್ದೆಯ ವ್ಯಾಪ್ತಿಯಲ್ಲೇ ಇದೆ.

ಅಥೆಂಟಿಕೇಶನ್ ಯೂಸರ್ ಏಜನ್ಸಿ (AUA)

ವ್ಯಾಪಾರದ ಪ್ರಕ್ರಿಯೆಯಲ್ಲಿ, ನಿಮ್ಮ ಜೊತೆ ಸಹ-ಸ್ಥಳೀಯರಾಗಿರುವ (ಕೊ-ಲೊಕೇಟೆಡ್) ಯಾರಾದರೊಬ್ಬರು ನಿಮಗೆ ನೀಡಿದ್ದ ಐಡಿ ದಾಖಲೆಯನ್ನು ಗುರುತಿಸಬೇಕಾದಾಗ ಅಂದರೆ ಐಡೆಂಟಿಫೈ ಮಾಡಬೇಕಾದಾಗ ನಿಮ್ಮ ವಿಶಿಷ್ಟ ಗುರುತು ಸಂಖ್ಯೆಯನ್ನು ದೃಢಪಡಿಸಲು ಸಹಾಯ ಮಾಡುವ ಸಂಘಟನೆಗಳು. ಕೆಲವರು ಹೇಳುವಂತೆ ಹೀಗೆ ಮಾಡುವ ಮೂಲಕ, ನಿಮ್ಮನ್ನು ಗುರುತಿಸುವ ಜವಾಬ್ದಾರಿಯಿಂದ ಅವರು ನುಣುಚಿಕೊಂಡು, ನಿಮಗೆ ಸಿಗಬೇಕಾದ ಒಂದು ಸೇವೆ ಸವಲತ್ತು ಇತ್ಯಾದಿಗಳನ್ನು, ‘ಅಥೆಂಟಿಕೇಶನ್ ಫೈಲ್ಯೂರ್’ ನೆಪದಲ್ಲಿ, ಆ ಸೇವೆ ನಿಮಗೆ ಸಿಗದಂತೆ ಮಾಡಬಹುದು.

ಅಥೆಂಟಿಕೇಶನ್ ಎನ್ನುವುದು ಹೊಸ ಐಡೆಂಟಿಫಿಕೇಶನ್.

ಬಯೋಮೆಟ್ರಿಕ್ಸ್:

ಇದು ನಿಮ್ಮ ದೇಶದ ಕೆಲವು ಲಕ್ಷಣಗಳನ್ನು ದಾಖಲೀಕರಣ ಮಾಡಿಕೊಳ್ಳುವ ಒಂದು ತಂತ್ರಜ್ಞಾನ. ದಾಖಲಿಸಲಾದ ನಿಮ್ಮ ಬಯೋಮೆಟ್ರಿಕ್ ಜೊತೆ ನಿಮ್ಮ ದೇಹದ ಲಕ್ಷಣಗಳು ಮ್ಯಾಚ್ ಆಗದಿದ್ದಲ್ಲಿ, ಮುಂದೆ ಒಂದು ದಿನ, ನಿಮ್ಮ ಗುರುತನ್ನು ನಿರಾಕರಿಸುವುದು, ನೀವು ನೀವಲ್ಲ ಎಂದು ರುಜುವಾತು ಪಡಿಸುವುದು ಇದರ ಸದ್ಯದ ಗುರಿ. ಜನರಿಗೆ ಸೇವೆಗಳು, ಸವಲತ್ತುಗಳು ಮತ್ತು ಹಕ್ಕುಗಳನ್ನು ನೀಡಲು ನಿರಾಕರಿಸುವ ಮೂಲಕ ಅವರನ್ನು ಬದುಕಿದ್ದೂ ಇಲ್ಲದಂತೆ ಮಾಡಲು ಇದು ಅತ್ಯಂತ ಅಧುನಿಕವಾದ ತಂತ್ರಜ್ಞಾನವೆಂದೂ ಕೆಲವರು ಹೇಳುತ್ತಾರೆ.

ಸೆಂಟ್ರಲ್ ಐಡೆಂಟಿಟೀಸ್ ಡಾಟಾ ರೆಪೊಸಿಟರಿ (CIDR)

ಹನ್ನೆರಡು ಎರ್ರಾಬಿರ್ರಿ ಅಂಕೆಗಳನ್ನು ಬಳಸಿ, ಸಿದ್ಧಪಡಿಸಲಾಗುವ ನಿಮ್ಮ ಡೆಮೊಗ್ರಾಫಿಕ್ ಮತ್ತು ಬಯೋಮೆಟ್ರಿಕ್ ದತ್ತಾಂಶಗಳ ಒಂದು ಕೇಂದ್ರೀಕೃತ ಡಾಟಾಬೇಸ್. 12 ಅಂಕೆಗಳ ಸಂಖ್ಯೆಯನ್ನು ಯುಐಡಿ ಸಂಖ್ಯೆ ಅಥವಾ ‘ಆಧಾರ್ ಸಂಖ್ಯೆ’ ಎಂದೂ ಕರೆಯಲಾಗುತ್ತದೆ.

ಕನ್ಸೆಂಟ್ (ಒಪ್ಪಿಗೆ):

ಕನ್ಸೆಂಟ್ ಮತ್ತು ಅಥೆಂಟಿಕೇಶನ್ (ದೃಢೀಕರಣ) ಒಂದೇ. ನೀವು ಸಲ್ಲಿಸಿದ ಡಾಟಾ (ಮಾಹಿತಿ), ಸಾಚಾ ಅಥವಾ ಅಥೆಂಟಿಕ್ ಎಂದು ಕಂಪ್ಯೂಟರ್ ದೃಢೀಕರಿಸಿದರೆ ಸಾಕು; ನೀವು ವ್ಯವಹಾರ (ಟ್ರಾನ್ಸಕ್ಷನ್)ಕ್ಕೆ ಒಪ್ಪಿಗೆ ನೀಡಿದ್ದೀರಿ ಎಂದೇ ಅರ್ಥ. ವ್ಯಾಪಾರದ ಹಳೆಯ ಕ್ರಿಯೆಗಳೊಂದಿಗೆ ಇದನ್ನು ಕನ್‌ಫ್ಯೂಸ್ ಮಾಡಿಕೊಳ್ಳಬೇಡಿ. ಆ ಹಳೆಯ ಕ್ರಮದಲ್ಲಿ ಒಪ್ಪಿಗೆ ದೃಢೀಕರಣ ಮತ್ತು ಗುರುತಿಸುವಿಕೆ ಬೇರೆ ಬೇರೆಯಾಗಿತ್ತು. ಈಗ ಒಂದು ವ್ಯವಹಾರಕ್ಕೆ ನೀವು ಹಾಜರಿರಬೇಕಾಗಿಯೇ ಇಲ್ಲ. ಯಾರು ಬೇಕಾದರೂ ನಿಮ್ಮ ಆಧಾರ್ ನಂಬರ್ ನೀಡಿ ನಿಮ್ಮ ಮಾಹಿತಿಯನ್ನು ದೃಢೀಕರಿಸಿ, ನಿಮ್ಮ ಒಪ್ಪಿಗೆಯನ್ನು ಅವರೇ ಕೊಟ್ಟುಬಿಡಬಹುದು!

ಕಾಸ್ಟ್ ಆಫ್ ಐಡೆಂಟಿಫಿಕೇಶನ್ (ಗುರುತಿಸಲು ತಗಲುವ ವೆಚ್ಚ): ಇದು ನಿಮ್ಮ ಬಯೋಮೆಟ್ರಿಕ್ ಕಾರ್ಡನ್ನು ಸುಮ್ಮನೆ ಸ್ವೈಪ್ ಮಾಡಲು ತಗಲುವ ವೆಚ್ಚ!

ಡಿ-ಡ್ಯುಪ್ಲಿಕೇಶನ್: 

ಪ್ರತಿಯೊಂದು ಡಾಟಾ ಬೇಸ್‌ನಲ್ಲಿ ನಿಮಗೆ ಒಂದೇ ಒಂದು ಎಂಟ್ರಿ ಮಾಡಲು ನೀಡುವ ಅವಕಾಶ. ಡಿಜಿಟಲ್ ಕೊಲೊನೈಜೇಶನ್: ಆಧಾರ್‌ನಂತಹ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿ, ಖಾಸಗಿ ಹಿತಾಸಕ್ತಿಗಳು ರಾಷ್ಟ್ರೀಯ ಹಾಗೂ ಸಾರ್ವಜನಿಕ ಹಿತಾಸಕ್ತಿಗಳಲ್ಲಿ ವಸಾಹತು ಸ್ಥಾಪಿಸುತ್ತಿವೆ ಎಂದು ಹೇಳುವ ವ್ಯಾಪಕವಾದ ಒಂದು ಒಳಸಂಚು ಸಿದ್ಧಾಂತ.

ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ): ನಿಮಗೆ ಸಬ್ಸಿಡಿ ದರದಲ್ಲಿ ನೀಡಲಾಗುವ ಸೇವೆಗೆ ಬದಲಾಗಿ ಒಂದಷ್ಟು ಮೊತ್ತದ ಹಣವನ್ನು ನಿಮ್ಮ ಫೈನಾನ್ಶಿಯಲ್ ಅಡ್ರೆಸ್‌ಗೆ ವರ್ಗಾಯಿಸುವ ಒಂದು ಹೊಸ ವಿಚಾರ.

ಡಾಕ್ಯುಮೆಂಟ್ ಫ್ರಾಡ್ (ದಾಖಲೆ ಮೋಸ): ಖೋಟಾ/ಹಾದಿ ತಪ್ಪಿಸುವ ದಾಖಲೆಗಳನ್ನು ತಪ್ಪಾದ ವೈಯಕ್ತಿಕ ಮಾಹಿತಿ ದಾಖಲಿಸಲು ಬಳಸುವುದು. ಈ ಮೋಸ ಹಲವು ಸಚಿವಾಲಯಗಳಲ್ಲಿ ವ್ಯಾಪಕವಾಗಿ ಅಸ್ತಿತ್ವದಲ್ಲಿದೆ ಎನ್ನುತ್ತಾರೆ ಕೆಲವರು.

ಫೈನಾನ್ಶಿಯಲ್ ಅಡ್ರೆಸ್: ಅಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಸಂಖ್ಯೆಯಲ್ಲ; ನಿಮ್ಮ ಯುಐಡಿ ಸಂಖ್ಯೆ.

ಫೈನಾನ್ಶಿಯಲ್ ಇನ್‌ಕ್ಲೂಶನ್: ಒಂದು ಬಿಲಿಯ ಫೈನಾನ್ಶಿಯಲ್ ಅಡ್ರೆಸ್‌ಗಳ ರಾಶಿ. ಪ್ರತಿಯೊಂದು ಆಧಾರ್ ಸಂಖ್ಯೆಯು ಒಂದು ಫೈನಾನ್ಶಿಯಲ್ ಅಡ್ರೆಸ್ ಆಗುತ್ತದೆ.

ಫ್ರಾಡ್ ಎಲಿಮಿನೇಶನ್ (ಮೋಸದ ನಿರ್ಮೂಲನ):

ಯುಐಡಿ ಸಂಖ್ಯೆಯು ಏಕೈಕ, ಜಾತಿಕ ಗುರುತು ಸಂಖ್ಯೆಯಾಗಿರುವುದರಿಂದ ಮೋಸದ ವ್ಯವಹಾರದ ನಿರ್ಮೂಲನ ಸಾಧ್ಯವೆಂದು ನಿರೀಕ್ಷಿಸಲಾಗಿದೆ.

ಅದೇ ರೀತಿಯಾಗಿ ಅಧಾರ್ ಸ್ಪೀಕ್‌ಗೆ ಹೊಸತಾಗಿ ಸೇರಿರುವ ಇತರ ಶಬ್ದಗಳೆಂದರೆ ಐಡೆಂಟಿಟಿ, ಐಡೆಂಟಿಟಿ ಬ್ಯಾರಿಯರ್ (ಸವಲತ್ತುಗಳನ್ನು ಪಡೆಯಲು ನಿಮ್ಮ ಗುರುತು ಸಾಬೀತುಪಡಿಸುವಲ್ಲಿ ಆಗುವ ವೈಫಲ್ಯ), ಐಡೆಂಟಿಟಿ ಫ್ರಾಡ್ ಇನ್‌ಕ್ಲೂಶನ್ (ಆಧಾರ್ ನಂಬರ್/ಎನ್‌ರೋಲ್‌ಮೆಂಟ್ ನಂಬರ್ ನೀಡಿಕೆ), ಪ್ರೈವಸಿ, ಪ್ಯೂರಿಫಿಕೇಶನ್ ಆಫ್ ಡಾಟಾ ಬೇಸಸ್ (ಯುಐಡಿ ಡಾಟಾ ಬೇಸ್‌ನಲ್ಲಿರದ ದಾಖಲೆಗಳನ್ನು ನಿರ್ಮೂಲನೆ ಮಾಡುವ ಪ್ರಕ್ರಿಯೆ), ರಿಸಾಸ್ಟ್ರಾರ್ಸ್‌ (ಖೋಟಾ ಫಲಾನುಭವಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೃಷ್ಟಿಸಿದವರೆಂದು ಯುಐಡಿಎಐ ಆಪಾದಿಸಿದ ಸರಕಾರಿ ಏಜನ್ಸಿಗಳು) ಮತ್ತು ವಾಲಂಟರಿ (ಅಂದರೆ ಹೊಸ, ಕಡ್ಡಾಯವಾಗಿ ಮಾಡಬೇಕಾದದ್ದು; ಆಧಾರ್ ಸಂಖ್ಯೆ ವಾಲಂಟರಿ ಅಂತ ಹೇಳಿದರೂ ಅದನ್ನು ಕಡ್ಡಾಯವಾಗಿ ಹೊಂದಿರಲೇಬೇಕು!)

ಕೃಪೆ: Economic Times.

Writer - ಅನುಪಮ್ ಸರಫ್

contributor

Editor - ಅನುಪಮ್ ಸರಫ್

contributor

Similar News

ಜಗದಗಲ
ಜಗ ದಗಲ