ಚುನಾವಣಾ ಆಯೋಗದ ಕಚೇರಿಗೆ ಭೇಟಿಯಲ್ಲೂ ಬಿಜೆಪಿ-ಕಾಂಗ್ರೆಸ್ ಹ್ಯಾಟ್ರಿಕ್ !

Update: 2017-08-08 18:08 GMT

  ಹೊಸದಿಲ್ಲಿ, ಆ.8: ಗುಜರಾತ್‌ನ ವಿಧಾನಸಭೆಯಿಂದ ರಾಜ್ಯಸಭಾ ಮೂರು ಸ್ಥಾನಗಳ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ತಲಾ ಮೂರು ಬಾರಿ ಭೇಟಿ ನೀಡುವ ಮೂಲಕ ಹ್ಯಾಟ್ರಿಕ್ ನಿರ್ಮಿಸಿದ್ದಾರೆ.

 ಗುಜರಾತ್‌ನಲ್ಲಿ ರಾಜ್ಯಸಭೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವ ಇಬ್ಬರು ಶಾಸಕರಾದ ಬೋಲಾಭಾಯ್ ಗೋಯಲ್ ಮತ್ತು ರಾಘವಜಿಭಾಯ್ ಪಟೇಲ್ ಮತವನ್ನು ರದ್ಧು ಪಡಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಒತ್ತಾಯಿಸಿದ ಬೆನ್ನಲ್ಲೇ ಬಿಜೆಪಿ ಚುನಾವಣಾ ಆಯೋಗದ ಕಚೇರಿಗೆ ತೆರಳಿತ್ತು.
ದಿಲ್ಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿರುವ ಬಿಜೆಪಿಯ ನಿಯೋಗವು ಕಾಂಗ್ರೆಸ್ ಪಕ್ಷದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು,ಅವರ ಮನವಿಯನ್ನು ತಿರಸ್ಕರಿಸಿ, ಮತ ಎಣಿಕೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿತ್ತು
ಬಿಜೆಪಿ ಮತ್ತು ಕಾಂಗ್ರೆಸ್‌ನ ನಿಯೋಗವು ಮೂರು ಬಾರಿ ಚುನಾವಣಾಧಿಕಾರಿಯನ್ನು ಭೇಟಿ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
 
ಇಂದೇ ಮತ ಎಣಿಕೆ ಮತ್ತು ಇಂದೇ ಫಲಿತಾಂಶ ಪ್ರಕಟ ಎಂದು ಹೇಳುವ ಚುನಾವಣಾ ಆಯೋಗ ಉನ್ನತ ಮಟ್ಟದ ಸಭೆ ನಡೆಸಿ ಉಭಯ ಪಕ್ಷಗಳ ನಾಯಕರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News