ಅಬ್ಬಾಸಿ ಪ್ರಧಾನಿಯಾಗಿ ಮುಂದುವರಿಯಲಿ: ನವಾಝ್ ಶರೀಫ್ ಇಂಗಿತ

Update: 2017-08-09 18:09 GMT

ಇಸ್ಲಾಮಾಬಾದ್, ಆ. 9: ಹೊಸದಾಗಿ ಆಯ್ಕೆಯಾಗಿರುವ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಮುಂದಿನ ವರ್ಷ ಚುನಾವಣೆ ನಡೆಯುವವರೆಗೆ ಅಧಿಕಾರದಲ್ಲಿ ಮುಂದುವರಿಯಬೇಕೆಂಬ ಇಚ್ಛೆಯನ್ನು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಬುಧವಾರ ಹೇಳಿದ್ದಾರೆ.

ಈ ಮೂಲಕ, ಪ್ರಧಾನಿ ಹುದ್ದೆಗೆ ತನ್ನ ಸಹೋದರ ಹಾಗೂ ಪಂಜಾಬ್ ಮುಖ್ಯಮಂತ್ರಿ ಶಹಬಾಝ್ ಶರೀಫ್‌ರನ್ನು ನೇಮಿಸುವ ಪ್ರಯತ್ನಗಳಿಗೆ ಅವರು ಅಡ್ಡಗಾಲು ಹಾಕಿದ್ದಾರೆ.

ನವಾಝ್ ಶರೀಫ್ ಕುಟುಂಬ ವಿದೇಶಗಳಲ್ಲಿ ಅಕ್ರಮ ಆಸ್ತಿ ಸಂಗ್ರಹಿಸಿಟ್ಟಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಳೆದ ತಿಂಗಳು ನವಾಝ್ ಶರೀಫ್‌ರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿತ್ತು.

ಆಗ, ಸದ್ಯಕ್ಕೆ ಶಾಹಿದ್ ಖಾಕನ್ ಮಧ್ಯಾಂತರ ಪ್ರಧಾನಿಯಾಗುತ್ತಾರೆ ಹಾಗೂ ತನ್ನ ತಮ್ಮ ಶಹಬಾಝ್ ನ್ಯಾಶನಲ್ ಅಸೆಂಬ್ಲಿಗೆ ಆಯ್ಕೆಯಾದ ಬಳಿಕ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಶರೀಫ್ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News