ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿದ ಮದೇಸಿ ಪಕ್ಷಗಳು

Update: 2017-08-11 17:11 GMT

ಕಠ್ಮಂಡು, ಆ. 11: ಸೆಪ್ಟಂಬರ್ 18ರಂದು ನಡೆಯಲಿರುವ ನೇಪಾಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಾವು ಭಾಗವಹಿಸುವುದಾಗಿ ಮದೇಸಿ ಪ್ರದೇಶದ ರಾಜಕೀಯ ಪಕ್ಷಗಳು ಶುಕ್ರವಾರ ಘೋಷಿಸಿವೆ.

ನೇಪಾಳ ಪ್ರವಾಸದಲ್ಲಿರುವ ಭಾರತದ ವಿದೇಶ ಸಚಿವೆ ಸುಶ್ವಾ ಸ್ವರಾಜ್‌ರನ್ನು ಭೇಟಿಯಾದ ಗಂಟೆಗಳ ಬಳಿಕ ಪಕ್ಷಗಳು ಈ ಘೋಷಣೆ ಮಾಡಿವೆ.

ನೇಪಾಳದ ನೂತನ ಸಂವಿಧಾನದ ತಿದ್ದುಪಡಿಗಾಗಿ ತಾವು ಸಿದ್ಧಪಡಿಸಿರುವ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮತದಾನಕ್ಕೆ ಒಡ್ಡಲು ಕೂಡ ಮದೇಸಿ ಪಕ್ಷಗಳು ಒಪ್ಪಿದವು.

 ಸುಶ್ಮಾ ಗುರುವಾರ ಸಂಜೆ ಬಿಮ್‌ಸ್ಟೆಕ್ ಸಚಿವ ಮಟ್ಟದ ಸಭೆಯ ನೇಪಥ್ಯದಲ್ಲಿ ಮದೇಸಿ ಪ್ರದೇಶದ ಪಕ್ಷಗಳ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News