ಪಾಕ್ ನ್ಯಾಯಾಂಗವನ್ನು ಟೀಕಿಸಿದ ಶರೀಫ್

Update: 2017-08-11 17:14 GMT

ಇಸ್ಲಾಮಾಬಾದ್, ಆ. 11: ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ತನ್ನನ್ನು ಬಲವಂತಪಡಿಸಿದ ನ್ಯಾಯಾಂಗವನ್ನು ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಝ್ ಶರೀಫ್ ಶುಕ್ರವಾರ ಟೀಕಿಸಿದ್ದಾರೆ. ಒಂದು ಪೆನ್ನಿನ ಗೆರೆಯ ಮೂಲಕ ಚುನಾಯಿತ ನಾಯಕನೊಬ್ಬನನ್ನು ಅವಮಾನಕರ ರೀತಿಯಲ್ಲಿ ಪದಚ್ಯುತಗೊಳಿಸಿರುವುದು ಪಾಕಿಸ್ತಾನದ 20 ಕೋಟಿ ಜನರಿಗೆ ಮಾಡಿದ ‘ಅವಮಾನ’ವಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವೊಂದು ಶರೀಫ್‌ರನ್ನು ಅಪ್ರಾಮಾಣಿಕತೆಗಾಗಿ ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು ಹಾಗೂ ಪನಾಮ ದಾಖಲೆ ಹಗರಣ ಪ್ರಕರಣದಲ್ಲಿ ಅವರ ವಿರುದ್ಧ ಮೊಕದ್ದಮೆ ಹೂಡುವಂತೆ ಆದೇಶಿಸಿತ್ತು.

 ‘‘ಇದು ಪಾಕಿಸ್ತಾನದ 20 ಕೋಟಿ ಜನರಿಗೆ ಮಾಡಿದ ಅವಮಾನವಾಗಿದೆ. ನೀವು ನನಗೆ ಮತ ನೀಡಿದಿರಿ. ಆದರೆ, ‘ಐವರು ಗೌರವಾನ್ವಿತರು (ನ್ಯಾಯಾಧೀಶರು) ಪೆನ್ನಿನ ಒಂದು ಗೆರೆಯ ಮೂಲಕ ನನ್ನನ್ನು ಮನೆಗೆ ಕಳುಹಿಸಿದರು’’ ಎಂದು ಝೀಲಂನಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ 67 ವರ್ಷದ ಶರೀಫ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News