17 ದೇಶಗಳಿಗೆ ಕಲುಷಿತ ಮೊಟ್ಟೆ ರಫ್ತು

Update: 2017-08-11 17:21 GMT

ಬ್ರಸೆಲ್ಸ್, ಆ. 11: ಕಲುಷಿತ ಮೊಟ್ಟೆಗಳು ಹಾಗೂ ಮೊಟ್ಟೆ ಉತ್ಪನ್ನಗಳು ತಮಗೆ ಬಂದಿರುವುದಾಗಿ ಐರೋಪ್ಯ ಒಕ್ಕೂಟದ 15 ದೇಶಗಳು ಹಾಗೂ ಚೀನಾ ಮತ್ತು ಸ್ವಿಟ್ಸರ್‌ಲ್ಯಾಂಡ್‌ಗಳು ವರದಿ ಮಾಡಿವೆ ಎಂದು ಐರೋಪ್ಯ ಒಕ್ಕೂಟದ ಅಧಿಕಾರಿಗಳು ಹೇಳಿದ್ದಾರೆ.

ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಮ್‌ನ ಹಲವಾರು ಉತ್ಪಾದಕರು ಕಳಹಿಸಿರುವ ಮೊಟ್ಟೆಗಳು ಮತ್ತು ಮೊಟ್ಟೆ ಉತ್ಪನ್ನಗಳನ್ನು ‘ಫಿಪ್ರೋನಿಲ್’ ಎಂಬ ಕೀಟನಾಶಕದಿಂದ ಸಂಸ್ಕರಿಸಿರುವುದು ಪತ್ತೆಯಾಗಿದೆ ಎಂದು ಒಕ್ಕೂಟದ ವ್ಯಾಪಾರ ಮತ್ತು ಕೃಷಿ ವಕ್ತಾರ ಡೇನಿಯಲ್ ರೊಸಾರಿಯೊ ಶುಕ್ರವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News