ಲಾಂಗ್‌ಜಂಪ್: ಅಮೆರಿಕದ ರೀಸ್‌ಗೆ ನಾಲ್ಕನೆ ಚಿನ್ನ

Update: 2017-08-12 18:35 GMT

ಲಂಡನ್, ಆ.12: ಅಮೆರಿಕದ ಬ್ರಿಟ್ನಿ ರೀಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಗ್ರ ಸ್ಥಾನ ಪಡೆದರು. ಇದರೊಂದಿಗೆ ನಾಲ್ಕನೆ ಬಾರಿ ಜಾಗತಿಕ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನ ತನ್ನದಾಗಿಸಿಕೊಂಡರು.

2009, 2011 ಹಾಗೂ 2013ರ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2012ರ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದ ರೀಸ್ ಶುಕ್ರವಾರ ನಡೆದ ಫೈನಲ್‌ನಲ್ಲಿ ಮೂರನೆ ಪ್ರಯತ್ನದಲ್ಲಿ 7.02 ವಿುೀ. ದೂರ ಜಿಗಿದು ಚಿನ್ನ ಜಯಿಸಿದರು.

 ರಶ್ಯದ ಡರ್ಯಾ ಕ್ಲಿಶಿನಾ(7.00 ಮೀ.) ಹಾಗೂ ರೀನಾರ ಸಹ ಆಟಗಾರ್ತಿ ಟಿಯಾನಾ ಬಾರ್ಟೊಲೆಟ್ಟಾ(6.97 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News