ಯುವರಾಜ್ ಹೊರಕ್ಕೆ;ಮನೀಷ್ ಪಾಂಡೆ ಸೇರ್ಪಡೆ

Update: 2017-08-13 18:52 GMT

ಹೊಸದಿಲ್ಲಿ, ಆ.13: ಶ್ರೀಲಂಕಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿ ಮತ್ತು ಏಕೈಕ ಟ್ವೆಂಟಿ-20ಪಂದ್ಯಕ್ಕೆ ಭಾರತದ ಕ್ರಿಕೆಟ್ ತಂಡವನ್ನು ಇಂದು ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

ಆಗಸ್ಟ್ 20ರಂದು ಆರಂಭವಾಗಲಿರುವ ಏಕದಿನ ಸರಣಿಗೆ ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್ ಮತ್ತು ಕರ್ನಾಟಕದ ಮನೀಷ್ ಪಾಂಡೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ಧಾರೆ.

ರೋಹಿತ್ ಶರ್ಮ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿದ್ದಾರೆ. ಅವರಿಗೆ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿತ್ತು. ಯುವರಾಜ್ ಸಿಂಗ್ ಕಳೆದ 6 ಏಕದಿನ ಪಂದ್ಯಗಳಲ್ಲಿ 109ರನ್ ಗಳಿಸಿದ್ದರು. ಈ ಕಾರಣದಿಂದಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

 ಮನೀಷ್ ಪಾಂಡೆ ದಕ್ಷಿಣ ಆಫ್ರಿಕದಲ್ಲಿ ಭಾರತ ಎ’ ತಂಡದಲ್ಲಿ ತ್ರಿಕೋನ ಸರಣಿಯಲ್ಲಿ ಐದು ಪಂದ್ಯಗಳಲ್ಲಿ 55 ರನ್, ಔಟಾಗದೆ 41ರನ್ , ಔಟಾಗದೆ 86ರನ್ , ಔಟಾಗದೆ 93 ರನ್ ಮತ್ತು ಔಟಾಗದೆ 32 ರನ್ ಗಳಿಸಿದ್ದರು.

ರೋಹಿತ್ ಶರ್ಮ ತಂಡದ ಉಪನಾಯಕರಾಗಿದ್ದಾರೆ. ಅಜಿಂಕ್ಯ ರಹಾನೆ ಕಳೆದ ವೆಸ್ಟ್ ಇಂಡಿಸ್ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

 ಅಕ್ಷರ್ ಪಟೇಲ್ ಅಕ್ಟೋಬರ್ 2016ರ ಬಳಿಕ ಮೊದಲ ಬಾರಿ ತಂಡಕ್ಕೆ ವಾಪಸಾಗಿದ್ದಾರೆ. ಮುಂಬೈನ ವೇಗಿ ಶಾರ್ದೂಲ್ ಠಾಕೂರ್ ದಕ್ಷಿಣ ಆಫ್ರಿಕದಲ್ಲಿ ಭಾರತ ‘ಎ’ ತಂಡದಲ್ಲಿ 4 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದರು.

ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಮುಹಮ್ಮದ್ ಶಮಿ ಮತ್ತು ಉಮೇಶ ಯಾದವ್ ಅವರಿಗೆ ಮುಂಬರುವ ಆಸ್ಟ್ರೇಲಿಯ ವಿರುದ್ಧದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ರಾಂತಿ ನೀಡಲಾಗಿದೆ.

 ಏಕದಿನ ಪಂದ್ಯಗಳು ಆ.20, 24, 27, 31 ಮತ್ತು ಸೆ.3ರಂದು ನಡೆಯಲಿದೆ. ಸೆ.6ರಂದು ಟ್ವೆಂಟಿ-20ಪಂದ್ಯ ನಡೆಯಲಿವೆೆ.

ತಂಡದ ವಿವರ ಈ ಕೆಳಗಿನಂತಿವೆ

ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ(ಉಪನಾಯಕ), ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್ ಜಾಧವ್, ಎಂಎಸ್.ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News