ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 6,622 ಸಿಬ್ಬಂದಿ ಕಡಿತ

Update: 2017-08-14 07:52 GMT

ಮುಂಬೈ,ಆ.14: ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆಗೊಳಿಸುವ ಚಿಂತನೆ ನಡೆಸಿದೆ.

2018 ಆರ್ಥಿಕ ವರ್ಷದ ಮೊದಲ ಹಂತದಲ್ಲಿ 6,622 ನೌಕರರನ್ನು ಕೆಲಸದಿಂದ ತೆಗೆಯುತ್ತಿದೆ. ವಿಆರ್‌ಎಸ್ ಮೂಲಕ ಯೋಜನೆಯನ್ನು ಅದು ಜಾರಿಗೊಳಿಸಲಿದೆ.

ಡಿಜಿಟಲೈಸೇಶನ್‌ನ ಮತ್ತು ಬ್ಯಾಂಕ್ ವಿಲೀನದ ಭಾಗವಾಗಿ 10,000 ರೂ. ಹೆಚ್ಚು ಉದ್ಯೋಗಿಗಳನ್ನು ವಿವಿಧ ಸ್ಥಾನಗಳಿಗೆ ವರ್ಗಾವಣೆಗೊಳಿಸಿ ನೇಮಕಗೊಳಿಸಿತ್ತು.

ಆಗಸ್ಟ್ ಆರರವರೆಗಿನ ಲೆಕ್ಕದ ಪ್ರಕಾರ ಒಂದೇ ಸ್ಥಳದಲ್ಲಿರುವ 594 ಶಾಖೆಗಳನ್ನು ವಿಲೀನಗೊಳಿಸಲಾಗಿದೆ. ಇದರಿಂದ 1.160 ಕೋಟಿ ರೂಪಾಯಿ ಪ್ರತೀವರ್ಷ ಬ್ಯಾಂಕಿಗೆ ಲಾಭವಾಗಲಿದೆ ಎಂಬ ನಿರೀಕ್ಷೆಯಿದೆ.

ಐದು ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಎಸ್‌ಬಿಐಯಲ್ಲಿ ವಿಲೀನವಾಗಿದೆ. ಒಂದೇ ನಗರದಲ್ಲಿ ಬ್ಯಾಂಕ್‌ನ ವಿವಿಧ ಶಾಖೆಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿಕ್ಕಾಗಿ ವಿಲೀನ ನಡೆಸಲಾಗಿದೆ.

ವಿವಿಧ ಶಾಖೆಗಳನ್ನು ಸ್ಥಗಿತಗೊಳಿಸಿದ್ದರಿಂದ ಬ್ಯಾಂಕ್ ಸಿಬ್ಬಂದಿಯ ಸಂಖ್ಯೆಕಡಿತ ಗೊಳಿಸುವುದು ಅನಿವಾರ್ಯವಾಗಿದೆ.

ಬ್ಯಾಂಕ್ ವಿಲೀನದ ನಂತರ ದೇಶದಲ್ಲಿಅತ್ಯಂತ ಹೆಚ್ಚು ಉದ್ಯೋಗವನ್ನು ಹೊಂದಿರುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿ ಎಸ್‌ಬಿಐ ಬದಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News