ಫೆಡರರ್‌ಗೆ ಶಾಕ್ ನೀಡಿದ ಝ್ವೆರೆವ್‌ಗೆ ಪ್ರಶಸ್ತಿ

Update: 2017-08-14 18:42 GMT

ಮಾಂಟ್ರಿಯಲ್, ಆ.14: ದ್ವಿತೀಯ ಶ್ರೇಯಾಂಕದ ರೋಜರ್ ಫೆಡರರ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಅಲೆಕ್ಸಾಂಡರ್ ಝ್ವೆರೆವ್ ಮಾಂಟ್ರಿಯಲ್ ಮಾಸ್ಟರ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಈ ಋತುವಿನಲ್ಲಿ ಐದನೆ ಪ್ರಶಸ್ತಿಯನ್ನು ಜಯಿಸಿರುವ ಝ್ವೆರೆವ್ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಟೂರ್ನಿ ಯುಎಸ್ ಓಪನ್‌ನಲ್ಲಿ ಪ್ರಶಸ್ತಿ ಫೇವರಿಟ್ ಆಗಿ ಗುರುತಿಸಿಕೊಂಡಿದ್ದಾರೆ. 20ರ ಹರೆಯದ ಜರ್ಮನಿ ಆಟಗಾರ ಝ್ವೆರೆವ್ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಸ್ವಿಸ್ ಸೂಪರ್‌ಸ್ಟಾರ್ ಫೆಡರರ್‌ರನ್ನು 6-3, 6-4 ಸೆಟ್‌ಗಳಿಂದ ಮಣಿಸಿದ್ದಾರೆ. ಜೂನ್‌ನಲ್ಲಿ ಹಾಲೆ ಓಪನ್‌ನಲ್ಲಿ ಫೆಡರರ್ ವಿರುದ್ಧ 6-1, 6-3 ಅಂತರದಿಂದ ಸೋತಿರುವ ಝ್ವೆರೆವ್ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಈ ವರ್ಷ 5ನೆ ಪ್ರಶಸ್ತಿಯನ್ನು ಜಯಿಸಿರುವ ಝ್ವೆರೆವ್ ಗರಿಷ್ಠ ಪ್ರಶಸ್ತಿ ಜಯಿಸಿರುವ ಫೆಡರರ್(5) ದಾಖಲೆಯನ್ನು ಸರಿಗಟ್ಟಿದರು.

‘‘ಇದು ಝ್ವೆರೆವ್ ಅವರ ಅಪೂರ್ವ ಸಾಧನೆ. ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸುವೆ’’ ಎಂದು ರನ್ನರ್-ಅಪ್ ಫೆಡರರ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News