ಸ್ವಾತಂತ್ರೋತ್ಸವದ ಶುಭಾಶಯ ಕೋರಿದ ಶಾಹಿದ್ ಅಫ್ರಿದಿ

Update: 2017-08-15 06:09 GMT

ಹೊಸದಿಲ್ಲಿ, ಆ.15: ಭಾರತ ಮಂಗಳವಾರ 71ನೆ ಸ್ವಾತಂತ್ರ ದಿನಾಚರಣೆ ಆಚರಿಸಿದ್ದು, ವಿಶ್ವದೆಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿವೆೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಟ್ವೀಟರ್ ಸಂದೇಶ ಎಲ್ಲರ ಗಮನ ಸೆಳೆದಿದೆ.

ಭಾರತಕ್ಕೆ ಸ್ವಾತಂತ್ರ ದಿನಾಚರಣೆಯ ಶುಭಾಶಯ. ನೆರೆಹೊರೆಯವರನ್ನು ಬದಲಾಯಿಸಲು ಯಾವುದೇ ಮಾರ್ಗವಿಲ್ಲ. ನಾವೆಲ್ಲರೂ ಶಾಂತಿ, ಸೌಹಾರ್ದತೆ ಹಾಗೂ ಪ್ರೀತಿ ಗಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ.ಮಾನವೀಯತೆ ಮುಂದುವರಿಯಲಿ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.
ಅಫ್ರಿದಿಯ ಟ್ವೀಟನ್ನು ಈಗಾಗಲೇ 13,000 ಜನರು ಇಷ್ಟಪಟ್ಟಿದ್ದು, 4000 ಜನರು ರೀ-ಟ್ವೀಟ್ ಮಾಡಿದ್ದಾರೆ.

 ಪಾಕಿಸ್ತಾನದಲ್ಲಿರುವ ಅಫ್ರಿದಿಯ ಅಭಿಮಾನಿಗಳು ಭಾರತಕ್ಕೆ ಸ್ವಾತಂತ್ರ ದಿನಾಚರಣೆಯ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ತನ್ನ ಫೌಂಡೇಶನ್‌ಗೆ ಬ್ಯಾಟ್‌ನ್ನು ದೇಣಿಗೆಯಾಗಿದ್ದ ನೀಡಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಕೃತಜ್ಞತೆ ಸಲ್ಲಿಸಲು ಅಫ್ರಿದಿ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ಕಳೆದ ಎಪ್ರಿಲ್‌ನಲ್ಲಿ ಅಫ್ರಿದಿ ನಿವೃತ್ತಿಯಾದ ಸಂದರ್ಭದಲ್ಲಿ ಟೀಮ್‌ಇಂಡಿಯಾ ಸದಸ್ಯರು ತಮ್ಮ ಸಹಿ ಇರುವ ಜರ್ಸಿಯೊಂದನ್ನು ಅಫ್ರಿದಿಗೆ ಉಡುಗೊರಯಾಗಿ ಕಳುಹಿಸಿಕೊಟ್ಟಿದ್ದರು.ಜರ್ಸಿಯಲ್ಲಿ ಕೊಹ್ಲಿ ಸಂದೇಶವನ್ನು ಬರೆದಿದ್ದರು. ಈ ಜರ್ಸಿ ಲಂಡನ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ 3 ಲಕ್ಷ ರೂ.ಗೆ ಮಾರಾಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News