ಭಾಗವತ್‍ರ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯ ಬದಲು ವಂದೇ ಮಾತರಂ !

Update: 2017-08-15 12:45 GMT

ಪಾಲಕ್ಕಾಡ್,ಆ.15: ನಿಷೇಧವನ್ನು ಉಲ್ಲಂಘಿಸಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್‍ಭಾಗವತ್ ಧ್ವಜಾರೋಹಣ ಮಾಡಿದ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯನ್ನು ಹಾಡಿಲ್ಲ ಎಂದು ದೂರಲಾಗಿದೆ. ರಾಷ್ಟ್ರಪತಾಕೆ ಹಾರಿಸಿದ ಬಳಿಕ ರಾಷ್ಟ್ರಗೀತೆ ಬದಲಾಗಿ. ವಂದೇ ಮಾತರಂ ಹಾಡಲಾಯಿತು.

ಪಾಲಕ್ಕಾಡ್ ಕರ್ನಕಿಯಮ್ಮನ್ ಸ್ಕೂಲ್‍ನಲ್ಲಿ ನಡೆದ ಸ್ವಾತಂತ್ರ್ಯದಿನಾಚರಣೆಯಲ್ಲಿ ನಿಯಮೋಲ್ಲಂಘನೆ ನಡೆದಿದೆ. ರಾಷ್ಟ್ರಧ್ವಜ ಕೋಡ್‍ನ ಉಲ್ಲಂಘನೆ ಇದು. ನಾಯಕರು ವೇದಿಕೆ ಬಿಟ್ಟು ಹೋದ ಬಳಿಕ ಪುನಃ ವೇದಿಕೆಯೇರಿ ರಾಷ್ಟ್ರಗೀತೆ ಹಾಡಲಾಗಿದೆ. ಶಾಲೆಗೆ ಬಂದ ಕೂಡಲೇ ಬೇರೆ ಯಾವುದಕ್ಕೂ ಕಾಯದೆ ಮೋಹನ್ ಭಾಗವತ್ ಧ್ವಜಾರೋಹಣ ಮಾಡಿದ್ದಾರೆ.

 ಅನುದಾನಿತ ಸ್ಕೂಲ್‍ನಲ್ಲಿ ರಾಜಕೀಯ ನಾಯಕರು ಸ್ವಾತಂತ್ರ್ಯೋತ್ಸವದ ವೇಳೆ ಧ್ವಜಾರೋಹಣ ನಡೆಸುವುದು ನಿಯಮೋಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿ ಭಾಗವತ್  ಧ್ವಜಾರೋಹಣವನ್ನು ಮಾಡದಂತೆ ನಿಷೇಧ ವಿಧಿಸಿದ್ದರು. ಮುಖ್ಯೋಪಾಧ್ಯಾಯರು, ಜನಪ್ರತಿನಿಧಿಗಳು ಮಾತ್ರವೇ ಧ್ವಜಾರೋಹಣ ಮಾಡಬಹುದೆಂದು ತಿಳಿಸಿದ್ದರು. ಈ ವಿಷಯವನ್ನು ಸೂಚಿಸಿ ಶಾಲಾಧಿಕಾರಿಗಳಿಗೂ, ಎಸ್ಪಿ, ಆರೆಸ್ಸೆಸ್ ನಾಯಕರಿಗೂ ಜಿಲ್ಲಾಧಿಕಾರಿ ನೋಟಿಸು ಜಾರಿ ಮಾಡಿದ್ದರು. ಆದರೆ ಮೋಹನ್ ಭಾಗವತ್‍ರೇ ಸ್ಕೂಲ್‍ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ ಎಂದು ಬಿಜೆಪಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News