‘ಪ್ರದರ್ಶನ ಆಧರಿಸಿ ಧೋನಿಗೆ ಸ್ಥಾನ’

Update: 2017-08-15 18:34 GMT

ಹೊಸದಿಲ್ಲಿ, ಆ.15: ಯುವರಾಜ್ ಸಿಂಗ್ ಈಗಾಗಲೇ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಇದೀಗ ಮತ್ತೊಬ್ಬ ಹಿರಿಯ ಬ್ಯಾಟ್ಸ್‌ಮನ್ ಎಂಎಸ್ ಧೋನಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಒತ್ತಡ ಎದುರಿಸುತ್ತಿದ್ದಾರೆ.

ಯುವರಾಜ್‌ರನ್ನು ಕೈಬಿಡಲಾಗಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ 2019ರ ವಿಶ್ವಕಪ್‌ನ ಭಾರತ ತಂಡದಲ್ಲಿ ಧೋನಿಗೆ ಅವಕಾಶ ನೀಡಲಾಗುವುದೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಿಲ್ಲ.

‘‘ಈ ಬಗ್ಗೆ ಯೋಚಿಸಿ ನಿರ್ಧರಿಸುತ್ತೇವೆ. ಧೋನಿ ಓರ್ವ ಲೆಜೆಂಡ್ ಆಟಗಾರ. ಅವರ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಅವರು ತಂಡಕ್ಕೆ ನೇರವಾಗಿ ಆಯ್ಕೆಯಾಗುತ್ತಾರೆಂದು ಹೇಳಲಾರೆ. ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಬೇಕೆಂದು ಎಲ್ಲರೂ ಬಯಸುತ್ತಾರೆ. ಧೋನಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ. ಅವರ ಪ್ರದರ್ಶನ ಚೆನ್ನಾಗಿರದಿದ್ದರೆ ಪರ್ಯಾಯ ಆಯ್ಕೆಯತ್ತ ನೋಡಲಾಗುವುದು’’ ಎಂದು ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಪ್ರಸಾದ್ ಹೇಳಿದ್ದಾರೆ. 36ರ ಹರೆಯದ ಧೋನಿ ಟೆನಿಸ್ ದಿಗ್ಗಜ ಆ್ಯಂಡ್ರೆ ಅಗಾಸ್ಸಿಯನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದ ಪ್ರಸಾದ್,‘‘ಆಟಗಾರನಿಗೆ ವಯಸ್ಸಾದಾಗ ಅಗಾಸ್ಸಿಯ ಪುಸ್ತಕ ಓದಬೇಕು. ಅವರ ವೃತ್ತಿಜೀವನ 30ನೆ ವಯಸ್ಸಿನ ನಂತರ ಆರಂಭವಾಗಿತ್ತು. ಆನಂತರ ಅವರು 3 ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News