ಉರ್ದು ಮುಸ್ಲಿಮರಿಗೆ ಸೀಮಿತವಲ್ಲ: ಅನ್ಸಾರಿ

Update: 2017-08-16 03:27 GMT

ಹೊಸದಿಲ್ಲಿ, ಆ.16:  ಉರ್ದು ಭಾಷೆಯನ್ನು ಮುಸ್ಲಿಮರಿಗೆ ಸೀಮಿತಗೊಳಿಸಿರುವುದು ಸರಿಯಲ್ಲ; ಅದು ಇಡೀ ದೇಶದ ಭಾಷೆ. ಇಂದು ವಿಶ್ವದ ಎಲ್ಲೆಡೆ ಉರ್ದು ಮಾತನಾಡುವವರಿದ್ದಾರೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.

'ಉರ್ದು ರಾಜಕೀಯ ವಿಚಾರವಾಗಿರುವುದು ವಿಷಾದನೀಯ. ಉರ್ದು ಮುಸ್ಲಿಮರ ಭಾಷೆ ಎಂಬ ಅಭಿಪ್ರಾಯ ರೂಪುಗೊಂಡಿದೆ' ಎಂದು ಹೇಳಿದರು. 'ದ ವೈರ್' ಸುದ್ದಿ ಜಾಲತಾಣದ ಉರ್ದು ಅವತರಣಿಕೆ ಉದ್ದೇಶಿಸಿ ಅವರು ಮಾತನಾಡಿದರು.

ದಕ್ಷಿಣ ಭಾರತ, ಪಶ್ಚಿಮ ಬಂಗಾಳ ಮತ್ತು ದೇಶದ ಇತರೆಡೆಗಳಲ್ಲೂ ಉರ್ದು ಮಾತನಾಡುವ ಬಹಳಷ್ಟು ಮಂದಿ ಇದ್ದಾರೆ. ಇದು ಇಡೀ ದೇಶದ ಭಾಷೆ. ಇಂದು ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ಕೂಡಾ ಉರ್ದು ಭಾಷಿಗರಿದ್ದಾರೆ ಎಂದು ಅಭಿಪ್ರಾಯಪಟ್ಟರು.

'ಉರ್ದು ಜೀವನಾಧಾರವನ್ನೂ ಕಲ್ಪಿಸಬಲ್ಲ ಭಾಷೆಯಾಗಬಲ್ಲುದೇ' ಎಂದು ಕೇಳಿದ ಪ್ರಶ್ನೆಗೆ 'ಇಲ್ಲ. ಆದರೆ ಹಾಗೆಂದ ಮಾತ್ರಕ್ಕೆ ಅದನ್ನು ಕಲಿಯಬಾರದು ಎಂಬ ಅರ್ಥವಲ್ಲ' ಎಂದು ಉತ್ತರಿಸಿದರು. ಉರ್ದುಭಾಷೆಯ ಅತಿದೊಡ್ಡ ಇತಿಮಿತಿಯೆಂದರೆ ಉರ್ದುವಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಇತರ ಭಾಷೆಗಳಲ್ಲಿ ಅಭಿವ್ಯಕ್ತಗೊಳಿಸಲಾಗದು ಎಂದು ಅನ್ಸಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News