ನೇತಾಜಿಯ ಅನುಮಾನಾಸ್ಪದ ಅಂತ್ಯ

Update: 2017-08-17 19:19 GMT

►1945ರ ಆ.18ರ ಈ ದಿನ ಭಾರತೀಯ ಕ್ರಾಂತಿಕಾರಿಗಳಿಗೆ ಕರಾಳ ದಿನವೆಂದೇ ಹೇಳಬಹುದು. ಮಹಾನ್ ಕ್ರಾಂತಿಕಾರಿ, ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್ ತೈವಾನ್‌ನ ತೈಹೋಕು ಎಂಬಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದರು. ಆ ದಿನ ಅವರು ಜಪಾನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎಂದು ನಂಬಲಾಗಿದೆ. ಅವರ ಸಾವಿನ ಕುರಿತ ಅನುಮಾನಗಳು ಇನ್ನೂ ಅನುಮಾನಗಳಾಗಿಯೇ ಉಳಿದಿವೆ. ಈ ಕುರಿತು ಹಲವಾರು ಸಮಿತಿಗಳು ರಚನೆಗೊಂಡರೂ ಸೂಕ್ತ ಸಾಕ್ಷಗಳು ದೊರಕದೆ ಇರುವುದು ನಿಜಕ್ಕೂ ಈ ದೇಶದ ದೊಡ್ಡ ದುರಂತ.

►1769ರ ಈ ದಿನ ಇಟಲಿಯ ಬ್ರೆಸಿಯಾ ಎಂಬಲ್ಲಿ ಮಹಾ ಬೆಂಕಿ ದುರಂತ ಸಂಭವಿಸಿತು. ಕಾರ್ಖಾನೆಯೊಂದರಲ್ಲಿ ಸಂಗ್ರಹಿಸಿದ್ದ ಸುಮಾರು 90 ಟನ್ ತೂಕದ ಗನ್‌ಪೌಡರ್‌ಗೆ ಬೆಂಕಿ ಬಿದ್ದ ಪರಿಣಾಮ 3,000 ಜನ ತಮ್ಮ ಪ್ರಾಣ ಕಳೆದುಕೊಂಡರು.

►1800ರ ಈ ದಿನ ವೆಲ್ಲೆಸ್ಲಿಯಿಂದ ಫೋರ್ಟ್ ವಿಲಿಯಮ್ ಕಾಲೇಜು ಕೋಲ್ಕತಾದಲ್ಲಿ ಸ್ಥಾಪನೆಗೊಂಡಿತು.

►1951ರಲ್ಲಿ ಖರಗಪುರದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಆರಂಭಗೊಂಡಿತು.

►1964ರಲ್ಲಿ ದಕ್ಷಿಣ ಆಫ್ರಿಕಾವು ತನ್ನ ವರ್ಣಭೇದ ನೀತಿಯ ಕಾರಣಗಳಿಂದಾಗಿ ಒಲಿಂಪಿಕ್ಸ್ ಕ್ರೀಡೆಗಳಿಂದ ನಿಷೇಧಿಸಲ್ಪಟ್ಟಿತು.

►1872ರಲ್ಲಿ ಮಹಾರಾಷ್ಟ್ರದ ಮಹಾನ್ ಅಂಧ ಸಂಗೀತಗಾರ ಪಂಡಿತ ವಿಷ್ಣು ದಿಗಂಬರ್ ಜನಿಸಿದರು.

►1900ರಲ್ಲಿ ಜವಾಹರ ಲಾಲ್ ನೆಹರೂ ಅವರ ಸಹೋದರಿ, ಭಾರತೀಯ ರಾಯಭಾರಿ, ರಾಜಕಾರಿಣಿ ವಿಜಯಲಕ್ಷ್ಮೀ ಪಂಡಿತ ಜನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News