ಕರ್ತವ್ಯ ನಿರ್ವಹಣೆಗೆ ರೈಲ್ವೇ ವೈದ್ಯರ ನಿರಾಕರಣೆ: ರೈಲ್ವೇ ಫ್ಲಾಟ್‌ಫಾರಂನಲ್ಲೇ ಬಾಕಿಯಾದ ಮಹಿಳೆಯ ಶವ

Update: 2017-08-18 15:39 GMT

ಮುಂಬೈ, ಆ.18: ರೈಲ್ವೇ ವೈದ್ಯರು ತನ್ನ ಕರ್ತವ್ಯ ನಿರ್ವಹಿಸಲು ನಿರಾಕರಿಸಿದ ಕಾರಣ ಚಲಿಸುತ್ತಿರುವ ರೈಲಿನಲ್ಲಿ ಕೊಲೆಯಾದ ಮಹಿಳೆಯೊಬ್ಬರ ಶವ ಮಹಾರಾಷ್ಟ್ರದ ಅಡ್ಮೊ ಗೊಂಡಿಯಾ ರೈಲು ನಿಲ್ದಾಣದ ಫ್ಲಾಟ್‌ಫಾರಂನಲ್ಲಿ ಗಂಟೆಗಟ್ಟಲೆ ಅನಾಥವಾಗಿ ಉಳಿದ ಘಟನೆ ವರದಿಯಾಗಿದೆ.

   ಗೊಂಡಿಯಾ ಮತ್ತು ಅಮಗಾಂವ್ ಮಧ್ಯೆ ಸಂಚರಿಸುವ ರೈಲಿನಲ್ಲಿದ್ದ ಗೊಂಡಿಯಾ ನಿವಾಸಿ ಸೂರಜ್‌ದೇವಿ ಜೈನ್ ಎಂಬ ಮಹಿಳೆಯನ್ನು ಗುರುವಾರ ರಾತ್ರಿ ಕೊಲೆ ಮಾಡಲಾಗಿದ್ದು ರೈಲಿನ ಬೋಗಿಯೊಂದರ ಸೀಟಿನಡಿ ಆಕೆಯ ಶವ ಪತ್ತೆಯಾಗಿತ್ತು. ಪ್ರಕರಣವನ್ನು ರೈಲ್ವೇಯ ಪ್ರಬಾರ ವೈದ್ಯರಾಗಿದ್ದ ಡಾ ರತ್ನಮಯ್ಯ ಅವರ ಗಮನಕ್ಕೆ ತಂದಾಗ ಅವರು ಕರ್ತವ್ಯ ನಿರ್ವಹಿಸಲು ನಿರಾಕರಿಸಿದರು. ಪ್ರಕರಣವನ್ನು ರೈಲ್ವೇ ಸುರಕ್ಷಾ ಪಡೆಯ ಗಮನಕ್ಕೆ ತಂದಿದ್ದು ಅವರೂ ನಿರ್ಲಕ್ಷ್ಯ ತೋರಿದರು ಎಂದು ಈ ಘಟನೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಶಿವಮ್ ಅಗರ್‌ವಾಲ್ ಎಂಬವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News