2ನೆ ಹಂತದ ಬಂದರು ವಿಸ್ತರಣೆಗೆ ಸರಕಾರ ಸಜ್ಜು

Update: 2017-08-19 18:39 GMT

ಕಾರವಾರ, ಆ.19: ನಗರದ ಬೈತಖೋಲದಲ್ಲಿರುವ ಪ್ರಮುಖ ವಾಣಿಜ್ಯ ಬಂದರಿನ ಎರಡನೆ ಹಂತದ ವಿಸ್ತರಣೆಗೆ ಯೋಜನೆ ಸಿದ್ಧವಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು, ನಗರದ ಟ್ಯಾಗೋರ್ ಕಡಲತೀರದ ಪ್ರಮುಖ ಭಾಗ ಈ ಯೋಜನೆಗೆ ಬಲಿಯಾಗುವ ಆತಂಕ ಎದುರಾಗಿದೆ.

ನೈಸರ್ಗಿಕ ಹಾಗೂ ಸರ್ವಋತು ಬಂದರು ಎಂದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರದ ವಾಣಿಜ್ಯ ಬಂದರಿನ ಅಭಿವೃದ್ಧಿ ಮಾತ್ರ ಕೆಲವು ವರ್ಷಗಳಿಂದ ಶೂನ್ಯವಾದಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಂದರಿನ ಅಭಿವೃದ್ಧಿ ಕುರಿತಂತೆ ನಿರ್ಲಕ್ಷ ಧೋರಣೆ ಅನುಸರಿಸಿಕೊಂಡು ಬರುತ್ತಿವೆ.

ದಶಕಗಳ ಹಿಂದೆ ಬಂದರಿನ ಎರಡನೆ ಹಂತದ ವಿಸ್ತರಣೆಗೆ ಯೋಜನೆ ರೂಪಿಸಲಾಗಿತ್ತು. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬರದ ಯೋಜನೆಯು ಪ್ರಸಕ್ತ ವರ್ಷ ಕೆಲವು ಬದಲಾವಣೆಗಳಿಂದ ಕಾರ್ಯಗತವಾಗುವ ಮಹೂರ್ತ ಕೂಡಿ ಬಂದಿದ್ದು, ಸಂತೋಷದ ವಿಚಾರವಾದರೂ ನಗರದ ಪ್ರಮುಖ ಪ್ರವಾಸಿ ತಾಣವಾದ ರವೀಂದ್ರನಾಥ್ ಕಡಲ ತೀರದ ಪ್ರಮುಖ ಭಾಗವನ್ನೇ ತನ್ನ ತೆಕ್ಕೆಯಲ್ಲಿ ಸೇರಿಸಿಕೊಳ್ಳುವ ವಿಚಾರ ಮಾತ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಸಾಗರಮಾಲಾ ಯೋಜನೆ: ಸಾಗರ ಮಾಲಾ ಯೋಜನೆ ಯಡಿ ವಾಣಿಜ್ಯ ಬಂದರಿನ ಬೈತಖೋಲ್ ಭಾಗದಿಂದ ಇರುವ 250ಮೀಟರ್‌ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, ಸುಮಾರು 511 ಕೋಟಿ ರೂ. ತನಕ ಯೋಜನೆಗೆ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

5 ಹೆಚ್ಚುವರಿ ಹಡಗುಕಟ್ಟೆ: ಎರಡನೆ ಹಂತದ ಕಾಮಗಾ ರಿಯಿಂದ ಐದು ಹೆಚ್ಚುವರಿ ಹಡಗು ಗಳನ್ನು ನಿಲ್ಲಿಸಲು ಅನುಕೂಲವಾಗಲಿದೆ. ಎರಡನೆ ಹಂತದ ವಿಸ್ತರಣೆ ಯೋಜನೆಯಂತೆ ಒಟ್ಟು 1,508 ಮೀ. ಉದ್ದದಷ್ಟು ಹಡಗುಕಟ್ಟೆ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ.

ಇದಕ್ಕಾಗಿ ಟಾಗೋರ್ ಕಡಲತೀರದ ಮೇಲಿನ ಉದ್ಯಾನದ ಸಮೀಪದಿಂದ ಪೂರ್ವದೆಡೆಗೆ 1,160 ಮೀ. ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಈಗಾಗಲೇ ಮಣ್ಣು ಪರೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಸದ್ಯ 2017-18ನೆ ಸಾಲಿನ ಬಜೆಟ್‌ನಲ್ಲಿ ಬಿಡುಗಡೆಯಾದ 125 ಕೋಟಿ ರೂ. ವೆಚ್ಚದಲ್ಲಿ 820 ಮೀ. ಉದ್ದದ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಉಳಿದ ಹಣ ಬಿಡುಗಡೆಯಾದ ನಂತರ ಬಾಕಿ ಕಾಮಗಾರಿ ನಡೆಸಲಾಗುತ್ತದೆ.

ಬಂದರು ವಿಸ್ತಾರ ಯೋಜ ನೆಯಡಿ ಕಡಲತೀರದ ಪಶ್ಚಿಮಕ್ಕೆ ಉದ್ದವಾಗಿ 1 ಕಿ.ಮೀ. ತನಕ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಕಾಮ ಗಾರಿ ಪೂರ್ಣಗೊಂಡ ನಂತರ ತಡೆಗೋಡೆ ಮೇಲೆ 10 ಮೀಟರ್ ಅಗಲದ ಸಿಮೆಂಟ್ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಹೀಗಾಗಿ ಕಡಲತೀರದ ಸೌಂದರ್ಯಕ್ಕೆ ಧಕ್ಕೆ ಆಗುವುದಿಲ್ಲ, ಬದಲಿಗೆ ಜನರಿಗೆ ಸಮುದ್ರ ವೀಕ್ಷಣೆಗೆ ಅನುಕೂಲವಾಗಲಿದೆ.

ರಾಜಕುಮಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಬಂದರು ಇಲಾಖೆ

ಬಂದರು ಇಲಾಖೆಯ ಅಧಿಕಾರಿಗಳು ಸ್ಥಳೀಯರಿಗೆ ಮಾಹಿತಿ ನೀಡದೆ ಏಕಾಏಕಿ ಯೋಜನೆ ಜಾರಿಗೆ ಮುಂದಾಗಿರುವುದು ಸರಿಯಲ್ಲ. ನಗರ ಸಭೆಯ ಗಮನಕ್ಕೂ ತರದೆ, ಮೀನುಗಾರರ ಅಹವಾಲು ಸ್ವೀಕರಿಸದೇ ಯೋಜನೆಗೆ ಸಿದ್ಧವಾ ಗಿರುವುದರಿಂದ ತೀರದ ಸೌಂದರ್ಯಕ್ಕೆ ಧಕ್ಕೆಯಾ ಗಲಿದ್ದು, ಈಗಲೇ ಎಚ್ಚೆತ್ತುಕೊಳ್ಳಬೇಕು.

ಸಂದೀಪ ತಳೇಕರ್ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

ಟಾಗೋರ್ ತೀರದವರೆಗೆ ವಿಸ್ತರಣೆಗೆ ತೀವ್ರ ವಿರೋಧ

ಟಾಗೋರ್ ಕಡಲತೀರದತ್ತ ಬಂದರು ವಿಸ್ತರಿಸು ವುದಕ್ಕೆ ನಗರಸಭೆ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ. ನಗರಸಭೆಯ ಪ್ರಮುಖ ಉದ್ಯಾನವನ ಹಾಗೂ ಮಕ್ಕಳ ಉದ್ಯಾನವನಗಳು ಯೋಜನೆ ಯಿಂದ ನಿರ್ನಾಮವಾಗಲಿವೆ. ಬಂದರು ಅಭಿವೃದ್ಧಿ ಪಡಿಸು ವುದಾದಲ್ಲಿ ಹಿಂದಿನ ಯೋಜನೆಯಂತೆ ಬಾವುಟೆಕಟ್ಟೆ ವ್ಯಾಪ್ತಿಯೊಳಗೆ ಮಾತ್ರ ವಿಸ್ತರಿಸಿಕೊಳ್ಳಲಿ ಎಂದು ನಗರಸಭೆ ಸದಸ್ಯರು ಆಗ್ರಹಿಸಿದ್ದಾರೆ.

Writer - ಶ್ರೀನಿವಾಸ್ ಬಾಡ್ಕರ್

contributor

Editor - ಶ್ರೀನಿವಾಸ್ ಬಾಡ್ಕರ್

contributor

Similar News