ನಾಳೆ ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ

Update: 2017-08-22 04:21 GMT

ಹೊಸದಿಲ್ಲಿ, ಆ.21: ಬ್ಯಾಂಕ್ ಗಳ   ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬ್ಯಾಂಕ್ ನೌಕರರು ಮಂಗಳವಾರ ದೇಶಾದ್ಯಂತ  ಮುಷ್ಕರ ನಡೆಸಲಿದ್ದಾರೆ.

ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ​ ಸೇವೆಗಳಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಆದರೆ ಖಾಸಗಿ ಬ್ಯಾಂಕುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ  ಉಂಟಾಗದು ಎನ್ನಲಾಗಿದೆ.

ಬ್ಯಾಂಕ್ ಗಳ  ಸುಧಾರಣಾ ಕ್ರಮಗಳ ಹೆಸರಿನಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಮತ್ತು  ಎಲ್ಲ ಬ್ಯಾಂಕ್‌ಗಳನ್ನೂ ಒಂದೇ ಬ್ಯಾಂಕಿಂಗ್ ಹೂಡಿಕೆ ಕಂಪೆನಿಯ ಅಡಿಯಲ್ಲಿ ತರಲು ಸರಕಾರ  ಯೋಜನೆ ಹಾಕಿಕೊಂಡಿದೆ.  ಇದನ್ನು ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕಿಂಗ್ ಯೂನಿಯನ್ಸ್(ಯುಎಫ್ ಬಿಯು)  ತಿಳಿಸಿದೆ.

1,32,000  ಬ್ಯಾಂಕ್  ಶಾಖೆಗಳ ಸುಮಾರು 10 ಲಕ್ಷ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News