ಅಧ್ಯಾಪಕಿಯ ಪ್ರಾಣಕ್ಕೆ ಕುತ್ತಾದ ‘ನಗು’ !

Update: 2017-08-21 08:17 GMT

ವಾಷಿಂಗ್ಟನ್, ಆ.21: ಮೆಕ್ಸಿಕೊದಲ್ಲಿ ರಜೆದಿನಗಳನ್ನು ಕಳೆಯುತ್ತಿದ್ದ ಅಮೆರಿಕದ  ಅಧ್ಯಾಪಕಿಯೊಬ್ಬರು ನಗು ನಗುತ್ತಾ  ಮನೆಯ ಬಾಲ್ಕನಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಚಾಲ್ರ್ಸ್ ಎ ಹ್ಯೂಸ್ಟನ್ ಶಾಲೆಯ ಅಧ್ಯಾಪಕಿ ಶಾರನ್ ರೆಗೊಲಿ ಸಿಫರ್ನೋಕ್(50) ಮೃತಪಟ್ಟ ಮಹಿಳೆ.

ಪುತ್ರಿಯ ಜೊತೆ ಮೆಕ್ಸಿಕೊದ ಗೆಳೆತಿಯ ಮನೆಯಲ್ಲಿ ಶಾರನ್ ಇದ್ದರು. ಬಾಲ್ಕನಿಯಲ್ಲಿ ಮಾತಾಡುತ್ತಾ ಇದ್ದರು. ಈ ಸಂದರ್ಭ ನಗಲು ಶುರು ಮಾಡಿದ ಅವರು, ನಗು ತಡೆಯಲಾಗದೆ  ಆಯತಪ್ಪಿ  ಕೆಳಗೆ ಬಿದ್ದಿದ್ದಾರೆ ಎಂದು ಸಹೋದರ ಡೇವಿಡ್ ರೆಗೊಳಿ ಹೇಳಿದರು. ಗಂಭೀರವಾಗಿ ಗಾಯಗೊಂಡ ಇವರನ್ನು ಸೇರಿಸಲಾದರೂ ಅವರು ಬದುಕುಳಿಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News