ತ್ರಿವಳಿ ತಲಾಖ್: ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2017-08-22 08:26 GMT

ಹೊಸದಿಲ್ಲಿ, ಆ.22: ತ್ರಿವಳಿ ತಲಾಖ್ ನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ನ ಪಂಚ ಪೀಠ ಎತ್ತಿ ಹಿಡಿಯುವ ಮೂಲಕ , ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮಹತ್ವದ  ತೀರ್ಪು ಪ್ರಕಟಿಸಿದರು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ನ್ಯಾಯ ಪೀಠವು ತಲಾಖ್ ಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಒಟ್ಟುಗೂಡಿಸಿ ಸತತ ಆರು ದಿನಗಳ ಕಾಲ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ತ್ರಿ ತಲಾಖ್ ವಿಚಾರದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಇದರೊಂದಿಗೆ ತ್ರಿವಳಿ ತಲಾಖ್ ನ್ನು  ಸುಪ್ರೀಂ ಕೋರ್ಟ್  ಮಾನ್ಯ ಮಾಡಿದ್ದು, ತ್ರಿವಳಿ ತಲಾಖ್ ಬಗ್ಗೆ ಸಂಸತ್ತಿನಲ್ಲಿ 6 ತಿಂಗಳಲ್ಲಿ ಕಾನೂನು ರಚಿಸಿ  ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ  ಸಲಹೆ ನೀಡಿದ್ದು,  ಅಷ್ಟರ ತನಕ ತ್ರಿವಳಿ ತಲಾಖ್ ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News