ಯುಪಿ ವಿರುದ್ಧ ಬಂಗಾಳಕ್ಕೆ ರೋಚಕ ಜಯ

Update: 2017-08-22 18:33 GMT

ಲಕ್ನೋ, ಆ.22: ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ 41ನೆ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್‌ ತಂಡ ಯು.ಪಿ.ಯೋಧಾ ವಿರುದ್ಧ ಒಂದಂಕಿ ಅಂತರದಿಂದ ಜಯ ಸಾಧಿಸಿತು.

ಉಭಯ ತಂಡಗಳ ನಡುವೆ ಪ್ರಬಲ ಹೋರಾಟ ಕಂಡುಬಂದಿದ್ದು, ಅಂತಿಮವಾಗಿ ಬಂಗಾಳ ತಂಡ 32-31 ಅಂತರದಿಂದ ಜಯಭೇರಿ ಬಾರಿಸಿತು. ಇದಕ್ಕೆ ಮೊದಲು ನಡೆದಿದ್ದ 40ನೆ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನು 35-21 ಅಂತರದಿಂದ ಮಣಿಸಿರುವ ಗುಜರಾತ್ ಫೋರ್ಚುನ್‌ಜೈಂಟ್ಸ್ ತಂಡ ಶ್ರೇಷ್ಠ ಫಾರ್ಮ್ ಮುಂದುವರಿಸಿತು. ಅಹ್ಮದಾಬಾದ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದ ಗುಜರಾತ್ ಲಕ್ನೋದಲ್ಲೂ ಉತ್ತಮ ಪ್ರದರ್ಶನ ನೀಡಿದೆ. 9 ಅಂಕ ಗಳಿಸಿದ ಫಝೆಲ್ ತಂಡದ ಗೆಲುವಿಗೆ ನೆರವಾಗಿದ್ದಲ್ಲದೆ ಈ ವರ್ಷದ ಲೀಗ್‌ನಲ್ಲಿ ಗರಿಷ್ಠ ಅಂಕ ಗಳಿಸಿ ದಾಖಲೆ ನಿರ್ಮಿಸಿದರು.

10 ಪಂದ್ಯಗಳಲ್ಲಿ 40 ಅಂಕ ಗಳಿಸಿರುವ ಗುಜರಾತ್ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಈ ಋತುವಿನಲ್ಲಿ 2ನೆ ಸೋಲನುಭವಿಸಿರುವ ಪುಣೇರಿ ತಂಡ 6 ಪಂದ್ಯಗಳಲ್ಲಿ 21 ಅಂಕ ಗಳಿಸಿ 2ನೆ ಸ್ಥಾನ ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News