ಬಿಡುಗಡೆಯಾಗುವುದಕ್ಕೂ ಮೊದಲೇ ಮುಂಬೈಯ ವ್ಯಕ್ತಿಯ ಕೈಯಲ್ಲಿ ನೂತನ 50 ರೂ. ನೋಟು?
Update: 2017-08-24 21:36 IST
ಹೊಸದಿಲ್ಲಿ, ಆ.24: ಶೀಘ್ರದಲ್ಲೇ ಆರ್ ಬಿಐ ಹೊರತರಲಿದೆ ಎನ್ನಲಾದ 50 ರೂ. ಮುಖಬೆಲೆಯ ನೋಟೊಂದರ ಜೊತೆಗೆ ಮುಂಬೈಯ ವ್ಯಕ್ತಿಯೋರ್ವ ಪೋಸ್ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಈ ಬಗ್ಗೆ ಚಿತ್ರ ಸಹಿತ ವರದಿ ಪ್ರಕಟಿಸಿದೆ. ಇದರ ಪ್ರಕಾರ ಆರ್ ಬಿಐ ನೂತನ 50 ರೂ. ಮುಖಬೆಲೆಯ ನೋಟನ್ನು ಬಿಡುಗಡೆಗೊಳಿಸುವ ಮೊದಲೇ ಈ ನೋಟಿನೊಂದಿಗೆ ವ್ಯಕ್ತಿಯೊಬ್ಬ ಫೋಟೊಗೆ ಪೋಸ್ ಕೊಟ್ಟಿದ್ದಾನೆ ಎನ್ನಲಾಗಿದೆ. ಆದರೆ ಈ ನೋಟು ಅಸಲಿಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಕೆಲ ದಿನಗಳ ಹಿಂದಷ್ಟೇ ನೂತನ 50 ಮತ್ತು 200 ರೂ. ನೋಟುಗಳು ಎನ್ನಲಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಗಸ್ಟ್ 25ರಂದು 200 ರೂ. ಮುಖಬೆಲೆಯ ನೂತನ ನೋಟುಗಳನ್ನು ಬಿಡುಗಡೆಗೊಳಿಸುವುದಾಗಿ ಆರ್ ಬಿಐ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.