ಬ್ರಿಟನ್‌ನಲ್ಲಿ ವೈದ್ಯರ ತೀವ್ರ ಅಭಾವ

Update: 2017-08-24 17:07 GMT

ಲಂಡನ್, ಆ. 24: ಬ್ರಿಟನ್‌ನಲ್ಲಿ ವೈದ್ಯರು ಮತ್ತು ನರ್ಸ್‌ಗಳ ‘ತೀವ್ರ’ ಕೊರತೆ ಕಂಡುಬಂದಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕನಿಷ್ಠ 2,000 ಸಾಮಾನ್ಯ ವೈದ್ಯರನ್ನು ನೇಮಿಸಲು ಆರೋಗ್ಯ ಅಧಿಕಾರಿಗಳು ಅಂತಾರಾಷ್ಟ್ರೀಯ ನೇಮಕಾತಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿರುವ ವೈದ್ಯರು ಮತ್ತು ನರ್ಸ್‌ಗಳಲ್ಲಿ ಭಾರತ ಮೂಲದವರು ಗಣನೀಯ ಪ್ರಮಾಣದಲ್ಲಿದ್ದಾರೆ. ಬ್ರಿಟನ್‌ನ ಹೊರಗಿನ ವೈದ್ಯರ ಸಂಖ್ಯೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ ಭಾರತದ 25,342 ವೈದ್ಯಕೀಯ ವೃತ್ತಿಪರರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News