×
Ad

ಸೂರ್ಯಗ್ರಹಣದ ದಿನ ಹುಟ್ಟಿದ ಮಗುವಿನ ಹೆಸರು 'ಎಕ್ಲಿಪ್ಸ್'!

Update: 2017-08-24 23:20 IST

ವಾಶಿಂಗ್ಟನ್, ಆ. 24: ಅಮೆರಿಕದಲ್ಲಿ ಆಗಸ್ಟ್ 21ರಂದು ನಡೆದ ಸಂಪೂರ್ಣ ಸೂರ್ಯಗ್ರಹಣದ ದಿನ ಹುಟ್ಟಿದ ಹೆಣ್ಣು ಶಿಶುವಿಗೆ 'ಎಕ್ಲಿಪ್ಸ್' (ಇಂಗ್ಲಿಷ್‌ನಲ್ಲಿ ಗ್ರಹಣಕ್ಕೆ 'ಎಕ್ಲಿಪ್ಸ್' ಎನ್ನುತ್ತಾರೆ) ಎಂದು ನಾಮಕರಣ ಮಾಡಲಾಗಿದೆ!

ಸೌತ್ ಕ್ಯಾರಲೈನದ ಗ್ರೀನ್‌ವಿಲ್‌ನಲ್ಲಿರುವ ಗ್ರೀನ್‌ವಿಲ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಬೆಳಗ್ಗೆ 8:04ಕ್ಕೆ ಫ್ರೀಡಂ ಯುಬ್ಯಾಂಕ್ಸ್ ಎಂಬ ಮಹಿಳೆ ಹೆಣ್ಣು ಶಿಶುವಿಗೆ ಜನ್ಮ ನೀಡಿದರು.

ತಮ್ಮ ಮಗಳಿಗೆ 'ವಾಯಲೆಟ್' ಎಂಬ ಹೆಸರಿಡಬೇಕೆಂದು ಹೆತ್ತವರು ಹಲವು ತಿಂಗಳುಗಳಿಂದ ಯೋಚಿಸಿದ್ದರು ಎಂದು 'ಎಬಿಸಿ ನ್ಯೂಸ್' ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News