ಕ್ವಿಟ್ ಇಂಡಿಯಾ ಚಳವಳಿಯ ಹುಮ್ಮಸ್ಸನ್ನು ಮರಳಿ ಪಡೆಯುವುದು ಹೇಗೆ?
1920ರ ಅಸಹಕಾರ ಚಳವಳಿ ಮತ್ತು 1930ರ ನಾಗರಿಕ ಅವಿಧೇಯತೆ ಚಳವಳಿಯ ಬಳಿಕ ಇದು ಜನಪ್ರಿಯವಾದ ಬೃಹತ್ ಜನತಾ ಚಳವಳಿಯಾಗಿತ್ತು. ಬ್ರಿಟಿಷರ ವಿರುದ್ಧ ಭಾರತೀಯರನ್ನು ಹೋರಾಟದಲ್ಲಿ ತೊಡಗಿಸುವ ಗಾಂಧೀಜಿಯವರ ಮ್ಯಾಜಿಕ್ ಭಾರತದ ಸ್ವಾತಂತ್ರ ಹೋರಾಟದ ಬೆನ್ನೆಲುಬಾಗಿತ್ತು. ಆ ಮೊದಲು ಕಾಂಗ್ರೆಸ್‌ನ ರಾಜಕಾರಣದಲ್ಲಿ ಶಿಕ್ಷಿತರು ಮತ್ತು ಮೇಲ್ವರ್ಗದವರು ಮಾತ್ರ ಭಾಗವಹಿಸುತ್ತಿದ್ದರು. ಗಾಂಧೀಜಿ ತನ್ನ ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಎರಡು ತತ್ವಗಳ ಆಧಾರದಲ್ಲಿ, ಜನತೆಯ ಲಿಂಗ, ಜಾತಿ, ಪಂಥ, ಧರ್ಮವನ್ನು ಮೀರಿ ಎಲ್ಲರೂ ತನ್ನ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ನಾವೀಗ 75ನೆ ವರ್ಷಾಚರಣೆಯನ್ನು ಆಚರಿಸುತ್ತಿರುವ 1942ರ ಕ್ವಿಟ್ ಇಂಡಿಯಾ ಚಳವಳಿಯು ಭಾರತದ ಸ್ವಾತಂತ್ರ ಹೋರಾಟದ ಒಂದು ಪ್ರಮುಖ ಮೈಲುಗಲ್ಲಾಗಿತ್ತು, ಒಂದು ಅತೀ ಮುಖ್ಯ ಘಟನೆಯಾಗಿತ್ತು. ಆಗಸ್ಟ್ 8ರಂದು ಗೊವಾಲಿಯಾ ಟ್ಯಾಂಕ್ ಮೈದಾನ (ಇಂದಿನ ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಕಾರ್ಯಕಾರಿ ಸಮಿತಿಯು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ಹೂಡಲು ನಿರ್ಧರಿಸಿತು. 1920ರ ಅಸಹಕಾರ ಚಳವಳಿ ಮತ್ತು 1930ರ ನಾಗರಿಕ ಅವಿಧೇಯತೆ ಚಳವಳಿಯ ಬಳಿಕ ಇದು ಜನಪ್ರಿಯವಾದ ಬೃಹತ್ ಜನತಾ ಚಳವಳಿಯಾಗಿತ್ತು. ಬ್ರಿಟಿಷರ ವಿರುದ್ಧ ಭಾರತೀಯರನ್ನು ಹೋರಾಟದಲ್ಲಿ ತೊಡಗಿಸುವ ಗಾಂಧೀಜಿಯವರ ಮ್ಯಾಜಿಕ್ ಭಾರತದ ಸ್ವಾತಂತ್ರ ಹೋರಾಟದ ಬೆನ್ನೆಲುಬಾಗಿತ್ತು. ಆ ಮೊದಲು ಕಾಂಗ್ರೆಸ್‌ನ ರಾಜಕಾರಣದಲ್ಲಿ ಶಿಕ್ಷಿತರು ಮತ್ತು ಮೇಲ್ವರ್ಗದವರು ಮಾತ್ರ ಭಾಗವಹಿಸುತ್ತಿದ್ದರು. ಗಾಂಧೀಜಿ ತನ್ನ ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಎರಡು ತತ್ವಗಳ ಆಧಾರದಲ್ಲಿ, ಜನತೆಯ ಲಿಂಗ, ಜಾತಿ, ಪಂಥ, ಧರ್ಮವನ್ನು ಮೀರಿ ಎಲ್ಲರೂ ತನ್ನ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಓರ್ವ ಸಮಾಜವಾದಿ ಕಾಂಗ್ರೆಸಿಗರಾದ ಯೂಸುಫ್‌ಮೆಹರಾಲಿ ಈ ಚಳವಳಿಗೆ ‘ಕ್ವಿಟ್ ಇಂಡಿಯಾ’ ಎಂಬ ಪದಗಳನ್ನು ಒದಗಿಸಿದ್ದರು. ಈ ಚಳವಳಿಯಲ್ಲಿ ಭಾಗವಹಿಸಿದ್ದ ಬಹುಪಾಲು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು ಮತ್ತು ಸಾವಿರಾರು ಮಂದಿ ಬಂಧನಕ್ಕೊಳಗಾದರು. ಚಳವಳಿ, ಜನಾಂದೋಲನವಾಗಿ ಬ್ರಿಟಿಷ್ ಸರಕಾರ ಅಲ್ಲಾಡತೊಡಗಿತು.
ಈ ಚಳವಳಿಯ ಮೂಲ ವೌಲ್ಯಗಳು ಯಾವುವು?
ಈ ಚಳವಳಿಯಲ್ಲಿ ಕಾಂಗ್ರೆಸ್ ಪ್ರಮುಖ ಪಕ್ಷವಾಗಿ ಚಳವಳಿಯ ಮುಂಚೂಣಿಯಲ್ಲಿತ್ತು ಎಂಬುದು ಪ್ರಶ್ನಾತೀತ. ಆದರೆ ಕಮ್ಯುನಿಷ್ಟರ ಮತ್ತು ಹಿಂದೂ-ಮುಸ್ಲಿಂ ರಾಷ್ಟ್ರೀಯವಾದಿಗಳ ರಾಜಕೀಯ ಸಂಘಟನೆಗಳು ಈ ಚಳವಳಿಯಿಂದ ದೂರವುಳಿದಿದ್ದವು. ರಶ್ಯಾವು ಜರ್ಮನಿಯ ವಿರುದ್ಧ ನಡೆಯುತ್ತಿದ್ದ ಯುದ್ಧದಲ್ಲಿ ಸೇರಿಕೊಂಡಿದ್ದರಿಂದ ಈ ಯುದ್ಧಕ್ಕೆ ಕಮ್ಯುನಿಷ್ಟರು ದೇಶಭಕ್ತಿಯ ಯುದ್ಧವೆಂದು ಹಣೆಪಟ್ಟಿ ಅಂಟಿಸಿದರು. ಪರಿಣಾಮವಾಗಿ ಕಮ್ಯುನಿಷ್ಟರು ಬ್ರಿಟಿಷ್‌ರಿಗೆ ಬೆಂಬಲ ನೀಡಿದರು. ಮುಸ್ಲಿಂ ರಾಷ್ಟ್ರೀಯವಾದ, ಜಿನ್ನಾರ ನಾಯಕತ್ವದಲ್ಲಿದ್ದ ‘ಮುಸ್ಲಿಂ ಲೀಗ್’ ಆದಾಗಲೇ ಪ್ರತ್ಯೇಕ ಮುಸ್ಲಿಂ ಪಾಕಿಸ್ತಾನದ ಬಗ್ಗೆ ವಾದ ಮಂಡಿಸಿದ್ದವು. ಅವು ಈ ಚಳವಳಿಯ ಬಗ್ಗೆ ಕಾಳಜಿ ತೋರಲಿಲ್ಲ. ಅವಿಭಜಿತ ಭಾರತವೆಂದರೆ ಅವುಗಳ ಭಾವನೆಯಲ್ಲಿ ಹಿಂದೂ ಭಾರತಕ್ಕೆ ಸಮಾನಾರ್ಥದ ಪದಗಳಾಗಿದ್ದವು.
ಹಿಂದೂ ರಾಷ್ಟ್ರೀಯವಾದಿಗಳಲ್ಲಿ ಎರಡು ಪ್ರಮುಖ ವಾಹಿನಿಗಳಿದ್ದವು. ಸಾವರ್ಕರ್ ನಾಯಕತ್ವದ ‘ಹಿಂದೂ ಮಹಾಸಭಾ’ ಕ್ವಿಟ್ ಇಂಡಿಯಾ ಚಳವಳಿಗೆ ವಿರೋಧಿಯಾಗಿತ್ತು. ಸರಕಾರಿ ಯಂತ್ರದಲ್ಲಿ, ಆಡಳಿತದಲ್ಲಿ ತಮ್ಮ ತಮ್ಮ ಕರ್ತವ್ಯಗಳಿಗೆ ಬದ್ಧರಾಗಿರುವಂತೆ ಅದು ಹಿಂದೂ ಮಹಾಸಭಾದ ಬೆಂಬಲಿಗರಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿತ್ತು.
ಇನ್ನೊಂದು ವಾಹಿನಿ ‘ಆರೆಸ್ಸೆಸ್’. ‘‘ಬ್ರಿಟಿಷ್ ಅಧಿಕಾರಿಗಳಿಗೆ ನೋವು ಉಂಟುಮಾಡುವ ಏನನ್ನೂ ಮಾಡದೆ, ಕಾನೂನನ್ನು ಪಾಲಿಸಿ’’ ಎಂದ ಅದರ ಮುಖ್ಯಸ್ಥ ಮಾಧವ ಸದಾಶಿವ ಗೋಳ್ವಾಲ್ಕರ್ ಆರೆಸ್ಸೆಸ್‌ನ ಎಲ್ಲ ಶಾಖೆಗಳಿಗೂ ಸೂಚನೆ ನೀಡಿದ್ದರು. ಓರ್ವ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಅಟಲ್‌ಬಿಹಾರಿ ವಾಜಪೇಯಿಯವರನ್ನು ಬಂಧಿಸಲಾಗಿತ್ತು. ಆದರೆ ಅವರು ತಾನೊಬ್ಬ ಕೇವಲ ಪ್ರೇಕ್ಷಕ, ಚಳವಳಿಕಾರನಲ್ಲನೆಂದು ತಡಮಾಡದೆ ಸ್ಪಷ್ಟೀಕರಣ ನೀಡಿದರು. ಆದ್ದರಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಬಿಜೆಪಿಯ ಹಿಂದಿನ ಅವತಾರವಾಗಿದ್ದ ಭಾರತಿಯ ಜನಸಂಘದ ಸ್ಥಾಪಕ ಶ್ಯಾಮ್‌ಪ್ರಸಾದ್ ಮುಖರ್ಜಿ ಆಗ ಬಂಗಾಲದಲ್ಲಿ ಹಿಂದೂ ಮಹಾ ಸಭಾದ ನಾಯಕರಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯನ್ನು ಸೋಲಿಸಲು ಬಂಗಾಲದಲ್ಲಿ ಬೇಕಾದುದನ್ನೆಲ್ಲ ತಾನೂ ಮಾಡುವುದಾಗಿ ಅವರು ಬ್ರಿಟಿಷರಿಗೆ ಆಶ್ವಾಸನೆ ನೀಡಿದ್ದರು.
ಚಳವಳಿಯಲ್ಲಿ ದೇಶದ ಜನತೆಯ ಭಾಗವಹಿಸುವಿಕೆ ಅದ್ಭುತವಾಗಿತ್ತು. ಎಲ್ಲ ಧರ್ಮಗಳ ಜನರು ಹೆಗಲಿಗೆ ಹೆಗಲು ಕೊಟ್ಟು ಹೋರಾಟ ನಡೆಸುತ್ತಿದ್ದಾಗ, ಗಾಂಧೀಜಿಯ ‘ಹಿಂದೂ- ಮುಸ್ಲಿಂ ಏಕತೆ’ ಎಂಬ ಒಂದು ಪ್ರಧಾನ ವೌಲ್ಯ, ತತ್ವ ಅಲ್ಲಿ ಎಲ್ಲರಿಗೂ ಎದ್ದು ಕಾಣಿಸುತಿತ್ತು. ಇವತ್ತು ನಾವು ಒಂದು ಮಹಾಚಳವಳಿಯ 75ನೆ ವಾರ್ಷಿಕ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿರುವ ವರ್ಷದಲ್ಲಿ ದೇಶದಲ್ಲಿ ಏನಾಗುತ್ತಿದೆ? ಏನು ನಡೆಯುತ್ತಿದೆ? ಭಾರತದ ಸ್ವಾತಂತ್ರ ಹೋರಾಟ ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ಅತ್ಯುತ್ಸಾಹವನ್ನೇನು ತೋರದ, ಚಳವಳಿಗೆ ಬಹಳ ಬೆಂಬಲ ನೀಡದ ಒಂದು ಆಡಳಿತ ಪಕ್ಷ ಚುನಾವಣಾ ಉದ್ದೇಶಗಳಿಗಾಗಿ ಸ್ವಲ್ಪ ತುತ್ತೂರಿ ಊದಬೇಕಾಗಿದೆ. ಆದ್ದರಿಂದ ತನ್ನ ‘ಮನ್‌ಕೀ ಬಾತ್’ನಲ್ಲಿ ಪ್ರಧಾನಿಯವರು ಜನತೆ, ಕೋಮುವಾದ, ಜಾತೀಯತೆ, ಭ್ರಷ್ಟಾಚಾರ ಇತ್ಯಾದಿಗಳನ್ನು ತ್ಯಜಿಸುತ್ತಾರೆಂಬ ಭರವಸೆಯನ್ನು ವ್ಯಕ್ತಪಡಿಸುತ್ತಾರೆ. ಇದು ಉನ್ನತವಾದ ಚಿಂತನೆಯೇನೋ ಸರಿ. ಆದರೆ ಇದೊಂದು ಕೇವಲ ಘೋಷಣೆಯಂತೆ, ಸ್ಲೋಗನ್‌ನಂತೆ ಕಾಣುತ್ತದೆ, ಯಾಕೆಂದರೆ ಈ ಸರಕಾರದ ನೀತಿಗಳಿಂದಾಗಿ ಕೋಮುವಾದ ಶರವೇಗದಲ್ಲಿ ಬೆಳೆದಿರುವುದನ್ನು ನಾವು ಕಂಡಿದ್ದೇವೆ. ರಾಮಮಂದಿರದ ವಿಭಾಜಕ ಪ್ರಶ್ನೆ, ಜನರನ್ನು ವಿಭಜಿಸುವ ತಂತ್ರ, ಮತ್ತು ಘರ್‌ವಾಪಾಸಿ ಪ್ರಶ್ನೆಗಳಿಗೆ ಇತ್ತೀಚೆಗೆ, ಇವೆಲ್ಲಕ್ಕಿಂತ ಹೆಚ್ಚು ಗಂಭೀರವಾದ, ಪ್ರಬಲವಾದ ‘ಪವಿತ್ರ ಗೋಮಾಂಸ’ ಭಕ್ಷಣೆಯ ಪ್ರಶ್ನೆಯನ್ನೂ ಸೇರಿಸಲಾಗಿದೆ. ಈ ಗೋಮಾಂಸ ಭಕ್ಷಣೆಯ ಒಂದೇ ವಿಷಯ ಗುಂಪು ಥಳಿತಗಳ ಸರಮಾಲೆಗೆ ಕಾರಣವಾದ ಸಮೂಹಸನ್ನಿಗೆ ಹಾದಿ ಮಾಡಿಕೊಟ್ಟಿದೆ. ಅಂಕೆಸಂಖ್ಯೆಗಳ ಪ್ರಕಾರ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಕಳೆದ ಮೂರು ವರ್ಷಗಳಲ್ಲಿ ಗುಂಪು ಥಳಿತ ಪ್ರಕರಣಗಳು ಹಲವು ಪಟ್ಟು ಹೆಚ್ಚಿವೆ. ಹಾಗೆಯೇ ಮುಸ್ಲಿಮರಿಗೆ ಅಭದ್ರತೆಯೂ ವಿಪರೀತ ಹೆಚ್ಚಿದೆ.
ಕಳೆದ ಮೂರು ವರ್ಷಗಳಲ್ಲಿ ದಲಿತರ ವಿರುದ್ಧ ದೌರ್ಜನ್ಯಗಳು ಹೆಚ್ಚುತ್ತಾ ಹೋಗಿ ಭಯಾನಕ ಪ್ರಮಾಣವನ್ನು ತಲುಪಿವೆ. ರೋಹಿತ್ ವೇಮುಲಾರವರ ಸಾಂಸ್ಥಿಕ ಕೊಲೆ, ಉನಾದಲ್ಲಿ ದಲಿತರ ಮೇಲೆ ನಡೆದ ಪಾಶವೀ ಥಳಿತ - ಇವು ದೇಶದ ದಲಿತರ ಪರಿಸ್ಥಿತಿಯ ಸೂಚ್ಯಂಕಗಳು. ಇನ್ನೊಂದೆಡೆ ಅರ್ಥವ್ಯವಸ್ಥೆಯು ಕುಸಿಯುತ್ತಿರುವಾಗ ವ್ಯಾಪಂನಂತಹ ಭ್ರಷ್ಟಾಚಾರ ಪ್ರಶ್ನೆಗಳನ್ನು ಮುಚ್ಚಿಡಲಾಗುತ್ತಿದೆ. ಹಿಂದೂ ಮುಸ್ಲಿಂ ಏಕತೆಯ ಮತ್ತು ಗೋಮಾಂಸ ಭಕ್ಷಣೆ ನಿಷೇಧದಂತಹ ವಿಷಯಗಳಲ್ಲಿ ಜನಪರ ಹೆಜ್ಜೆಗಳನ್ನು ತೆಗೆದುಕೊಳ್ಳುವವರೆಗೆ ಪ್ರಧಾನಿಯವರ ಘೋಷಣೆಗಳು ಪೊಳ್ಳು ಕಹಳೆ ಊದಿದಂತಾಗುತ್ತದೆ.
ಬಿಜೆಪಿ ರಾಷ್ಟ್ರವ್ಯಾಪಿ ‘ಸಂಕಲ್ಪ್‌ಸೇ ಸಿದ್ಧಿ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರಲ್ಲಿ ಸಾವರ್ಕರ್ ಕುರಿತಾದ ಒಂದು ಸಿನೆಮಾವನ್ನೂ ಪ್ರದರ್ಶಿಸಲಾಗುತ್ತದೆ. ಸಾವರ್ಕರ್ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಬಲವಾಗಿ ವಿರೋಧಿಸಿದವರಾದ್ದರಿಂದ ಇದು ಕ್ವಿಟ್ ಇಂಡಿಯಾ ಚಳವಳಿಯ ಮೂಲಸತ್ಯದ ಮೂಲತತ್ವದ ಸಂಪೂರ್ಣ ನಿರಾಕರಣೆಯಾದಂತಾಗುತ್ತದೆ. ಮಹಾತ್ಮಾಗಾಂಧಿಯನ್ನು ಸ್ವಚ್ಛತಾ ಆಂದೋಲನದ ಒಂದು ಐಕಾನ್ ಮಾಡುವ ಬದಲಾಗಿ ನಾವು ಭ್ರಾತೃತ್ವ ಮತ್ತು ಸಮಾನತೆಯ ಸ್ಥಾಪನೆಗಾಗಿ ಪ್ರಯತ್ನಿಸಬೇಕಾಗಿದೆ. ದೇಶದ ವೈವಿಧ್ಯಕ್ಕೆ ಗೌರವ ನೀಡಿದ ಗಾಂಧೀಜಿ ಗೋಹತ್ಯೆ ನಿಷೇಧಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದ್ದರೆಂಬುದನ್ನು ಮರೆಯದಿರೋಣ. ಸಂಸತ್ತಿನ ಜಂಟಿಅಧಿವೇಶನದ ನಿಲುವಳಿಯಲ್ಲಿ ಸ್ವಾತಂತ್ರ ಹೋರಾಟದ ಕೇಂದ್ರವಾಗಿದ್ದ ಗಾಂಧಿ ಮತ್ತು ನೆಹರೂರವರ ಹೆಸರು ಉಲ್ಲೇಖಿಸಲ್ಪಡುತ್ತದೆಂದು ಆಶಿಸೋಣ.