×
Ad

ಪಾಕ್: ಅಮೆರಿಕ ವಿರೋಧಿ ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್

Update: 2017-08-27 23:29 IST

ಕರಾಚಿ,ಆ.27: ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ರವಿವಾರ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಅಮೆರಿಕ ವಿರೋಧಿ ಪ್ರತಿಭಟನಕಾರರ ಗುಂಪನ್ನು ಚದುರಿಸಲು ಪೊಲೀಸರು ಲಾಠಿಜಾರ್ಚ್ ಹಾಗೂ ಅಶ್ರುವಾಯು ಪ್ರಯೋಗಿಸಿದ್ದಾರೆ.

ವಿದ್ಯಾರ್ಥಿಗಳ ಗುಂಪೊಂದು ಅಮೆರಿಕದ ಕಾನ್ಸುಲೇಟ್‌ನೆಡೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದಾಗ ಪೊಲೀಸರು ಅವರನ್ನು ಚದುರಿಸಲು ಕಾರ್ಯಾಚರಣೆಗಿಳಿದರೆಂದು ಪೊಲೀಸ್ ಅಧಿಕಾರಿ ಇರ್ಫಾನ್ ಬಲೂಚ್ ತಿಳಿಸಿದ್ದಾರೆ.

 ಅಫ್ಘಾನಿಸ್ತಾನದಲ್ಲಿ ಅಮೆರಿಕ ಪಡೆಗಳ ವಿರುದ್ಧ ಸಮರ ಸಾರಿರುವ ಉಗ್ರರಿಗೆ ಪಾಕಿಸ್ತಾನವು ಸುರಕ್ಷಿತ ಸ್ವರ್ಗವಾಗಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು ಹಾಗೂ ಪಾಕ್‌ಗೆ ನೀಡುವ ನೆರವನ್ನು ಕಡಿತಗೊಳಿಸುವ ಬಗ್ಗೆ ಚಿಂತಿಸುತ್ತಿರುವುದಾಗಿ ಹೇಳಿದ್ದರು. ಆದರೆ ಟ್ರಂಪ್ ಆರೋಪವನ್ನು ಪಾಕ್ ನಿರಾಕರಿಸಿದ್ದು, ತನ್ನ ಸೈನಿಕರು ಉಗ್ರರೊಂದಿಗೆ ಸಮರದಲ್ಲಿ ತೊಡಗಿದ್ದಾರೆ ಹಾಗೂ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಅದು ಭಾರೀ ಬೆಲೆಯನ್ನು ತೆತ್ತಿದೆಯೆಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News