ಸೆ.1ರಂದು ಸಂಘ ಪರಿವಾರ, ಬಿಜೆಪಿಯ ಸಮನ್ವಯ ಸಭೆ

Update: 2017-08-29 12:32 GMT

ಹೊಸದಿಲ್ಲಿ,ಆ.29: ಬಿಜೆಪಿ ಮತ್ತು ಸಂಘಪರಿವಾರದ ಎಲ್ಲ 40 ಸಂಘಟನೆಗಳು ಮಾಡಿರುವ ಕೆಲಸಗಳನ್ನು ಪರಿಶೀಲಿಸಲು ಸೆ.1ರಂದು ಮಥುರಾದಲ್ಲಿ ತಾನು ಕರೆದಿರುವ ಸಮನ್ವಯ ಸಭೆಯಲ್ಲಿ ಭಾಗವಹಿಸುವಂತೆ ಅವುಗಳ ಉನ್ನತ ನಾಯಕತ್ವಕ್ಕೆ ಆರೆಸ್ಸೆಸ್ ನಿರ್ದೇಶ ನೀಡಿದೆ.

ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗಳು, ಇತ್ತೀಚಿಗೆ ಹರ್ಯಾಣದಲ್ಲಿ ನಡೆದ ಡೇರಾ ಹಿಂಸಾಚಾರ ಮತ್ತು ಇತರ ಪ್ರಚಲಿತ ವಿಷಯಗಳ ಬಗ್ಗೆಯೂ ಮೂರು ದಿನಗಳ ಕಾಲ ನಡೆಯಲಿರುವ ಸಭೆಯು ಚರ್ಚಿಸಲಿದೆ ಎಂದು ಸಂಘದ ಪದಾಧಿಕಾರಿಯೋ ರ್ವರು ತಿಳಿಸಿದರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್, ಪ್ರಧಾನ ಕಾರ್ಯದರ್ಶಿ ಭೈಯ್ಯೆಜಿ ಜೋಶಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ವಿಹಿಂಪನ ಪ್ರವೀಣ ತೊಗಡಿಯಾ ಅವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇದು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆಯಲಿರುವ ಆರೆಸ್ಸೆಸ್‌ನ ಮೊದಲ ಪ್ರಮುಖ ಸಭೆಯಾಗಲಿದೆ. ರಾಜ್ಯದ ಕೆಲವು ಬಿಜೆಪಿ ನಾಯಕರೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News